June 15, 2026
Monday, June 15, 2026
spot_img

ಜೆಎಸ್‌ಡಬ್ಲ್ಯೂ-ಫೆಲ್ಡ್‌ಸ್ಪಾರ್ ಜುಗಲ್‌ಬಂದಿ: ಒಲಿಂಪಿಕ್ಸ್‌ ಪದಕ ಬೇಟೆಗೆ ಭಾರತೀಯ ಕ್ರೀಡಾಪಟುಗಳಿಗೆ ಹೈಟೆಕ್ ಬಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೆಎಸ್‌ಡಬ್ಲ್ಯೂ ಸಮೂಹದ ‘ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್’ (IIS) ಮತ್ತು ಫೆಲ್ಡ್‌ಸ್ಪಾರ್ ಗ್ರೂಪ್ ಹೋಲ್ಡಿಂಗ್ಸ್ ಲಿಮಿಟೆಡ್ ದೀರ್ಘಕಾಲೀನ ಕಾರ್ಯತಂತ್ರದ ಪಾಲುದಾರಿಕೆಯನ್ನು ಘೋಷಿಸಿವೆ. ಈ ಒಪ್ಪಂದದ ಭಾಗವಾಗಿ, ಏಷ್ಯಾದಲ್ಲೇ ಮೊದಲ ಬಾರಿಗೆ ಭಾರತದ ಐಐಎಸ್ ಹೈ-ಪರ್ಫಾರ್ಮೆನ್ಸ್ ಕೇಂದ್ರದಲ್ಲಿ ಅತ್ಯಾಧುನಿಕ ‘ಸ್ಮಾರ್ಟ್ ಸರ್ಫೇಸ್’ ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತಿದೆ.

45 ಮೀಟರ್ ಟ್ರ್ಯಾಕ್; ಅಥ್ಲೀಟ್‌ಗಳ ಪ್ರತಿ ಹೆಜ್ಜೆಯ ಮೇಲೂ ನಿಗಾ!

ಕೇಂದ್ರದಲ್ಲಿ 45-ಮೀಟರ್ ಉದ್ದದ ವಿಶೇಷ ‘ಸ್ಮಾರ್ಟ್ ಸರ್ಫೇಸ್ ಟ್ರ್ಯಾಕ್’ ನಿರ್ಮಾಣವಾಗಲಿದೆ. ಈ ಟ್ರ್ಯಾಕ್‌ನಲ್ಲಿ ಅಳವಡಿಸಲಾಗಿರುವ ಹೈಟೆಕ್ ಸೆನ್ಸಾರ್‌ಗಳು ಕ್ರೀಡಾಪಟುಗಳ ಓಟದ ವೇಗ, ಹೆಜ್ಜೆಯ ಶೈಲಿ ಮತ್ತು ಅವರು ಪ್ರಯೋಗಿಸುವ ಬಲದ ನಿಖರ ಮಾಹಿತಿಯನ್ನು ತರಬೇತುದಾರರಿಗೆ ತಕ್ಷಣವೇ ನೀಡಲಿವೆ. ಇದು ಕ್ರೀಡಾಪಟುಗಳ ತಪ್ಪುಗಳನ್ನು ತಿದ್ದಲು ಸಹಕಾರಿಯಾಗಲಿದೆ ಎಂದು ಫೆಲ್ಡ್‌ಸ್ಪಾರ್ ಸಂಸ್ಥಾಪಕಿ ಅಲ್ವಿನಾ ಚೆನ್ ಹಾಗೂ IIS ನ ಮನೀಷಾ ಮಲ್ಹೋತ್ರಾ ತಿಳಿಸಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ ಟ್ರ್ಯಾಕ್‌ಗಿಂತಲೂ 20% ಹೆಚ್ಚು ಎನರ್ಜಿ!

“ಈ ತಂತ್ರಜ್ಞಾನವು ಲ್ಯಾಬ್ ಸಂಶೋಧನೆಯನ್ನು ನೇರವಾಗಿ ಮೈದಾನಕ್ಕೆ ತಂದಿದೆ. ಕ್ರೀಡಾಪಟುಗಳಿಗೆ ಆಯಾಸ ಕಡಿಮೆ ಮಾಡುವ ಈ ಟ್ರ್ಯಾಕ್, ಪ್ಯಾರಿಸ್ ಒಲಿಂಪಿಕ್ ಟ್ರ್ಯಾಕ್‌ಗಿಂತ ಶೇ 20 ರಷ್ಟು ಹೆಚ್ಚಿನ ಶಕ್ತಿ (Energy Return) ನೀಡುತ್ತದೆ,” ಎಂದು ಹೈ ಪರ್ಫಾರ್ಮೆನ್ಸ್ ಡೈರೆಕ್ಟರ್ ಗ್ಯಾರಿ ಹಾಲ್ ವಿವರಿಸಿದ್ದಾರೆ.

ಕ್ರಿಕೆಟ್, ಫುಟ್‌ಬಾಲ್‌ಗೂ ವಿಸ್ತರಣೆಯ ಕನಸು

ಭವಿಷ್ಯದಲ್ಲಿ ಈ ಸ್ಮಾರ್ಟ್ ಟ್ರ್ಯಾಕ್‌ಗಳನ್ನು ಭಾರತದಾದ್ಯಂತ ವಿಸ್ತರಿಸುವ ಯೋಜನೆ ಜೆಎಸ್‌ಡಬ್ಲ್ಯೂ ಸಂಸ್ಥೆಗಿದೆ. ಕೇವಲ ಅಥ್ಲೆಟಿಕ್ಸ್ ಮಾತ್ರವಲ್ಲದೆ ಕ್ರಿಕೆಟ್, ಫುಟ್‌ಬಾಲ್, ಕಬಡ್ಡಿ ಮತ್ತು ಹಾಕಿ ಕ್ರೀಡೆಗಳಿಗೂ ಈ ತಂತ್ರಜ್ಞಾನ ಬಳಸಿ, ಜಾಗತಿಕ ಮಟ್ಟದಲ್ಲಿ ಪದಕ ಗೆಲ್ಲುವ ಹೊಸ ತಲೆಮಾರಿನ ಕ್ರೀಡಾಪಟುಗಳನ್ನು ಸಿದ್ಧಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !