ಜೂನಿಯರ್​ ಲೈನ್​ಮೆನ್​ ಹುದ್ದೆ ಗಳಿಸಿಕೊಂಡ ತೆಲಂಗಾಣದ ಸಿರಿಶಾ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತೆಲಂಗಾಣದ ಯುವತಿಯೊಬ್ಬಳು ಸರಸರನೇ ಕಂಬ ಹತ್ತಿ ವಿದ್ಯುತ್​ ಸಂಪರ್ಕ ದುರಸ್ತಿ ಮಾಡುವುದನ್ನು ಕಲಿತು ಜೂನಿಯರ್​ ಲೈನ್​ಮೆನ್​ ಹುದ್ದೆ ಪಡೆದುಕೊಂಡಿದ್ದು, ಈ ಮೂಲಕ ಅವರು ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿಯೇ ಮೊದಲ ಲೈನ್​ ವುಮೆನ್​ ಎನಿಸಿಕೊಂಡಿದ್ದಾರೆ.
ಜೂನಿಯರ್​ ಲೈನ್​ಮೆನ್​ ಹುದ್ದೆ ಗಿಟ್ಟಿಸಿಕೊಂಡ ತೆಲಂಗಾಣದ ಸಿರಿಶಾಸಿದ್ದಿಪೇಟೆ ಜಿಲ್ಲೆಯ ಗಣೇಶಪಲ್ಲಿ ಗ್ರಾಮದ ಸಿರಿಶಾ ತೆಲಂಗಾಣ ರಾಜ್ಯ ಸದರ್ನ್ ಪವರ್ ಡಿಸ್ಟ್ರಿಬ್ಯೂಷನ್ ಕಂಪನಿ ಲಿಮಿಟೆಡ್ (ಟಿಎಸ್‌ಎಸ್‌ಪಿಡಿಸಿಎಲ್) ನಡೆಸಿದ ಲೈನ್‌ಮನ್​ಗಳ ಆಯ್ಕೆಯಲ್ಲಿ ಜೂನಿಯರ್​ ಲೈನ್​ಮೆನ್​ ಹುದ್ದೆ ಪಡೆದುಕೊಂಡವರು. ಆಯ್ಕೆಯ ವೇಳೆ ಸಿರಿಶಾ ಅವರು ಕಂಬವನ್ನು ಸುಲಲಿತವಾಗಿ ಹತ್ತಿ, ಇಳಿಯುವುದನ್ನು ಕಲಿತಿದ್ದು, ಹುದ್ದೆಗೆ ಆಯ್ಕೆ ಮಾಡಲಾಗಿದೆ.
ಇಂಧನ ಸಚಿವ ಜಗದೀಶ್ ರೆಡ್ಡಿ ಅವರು ಮೊದಲ ಲೈನ್​ ವುಮೆನ್​ ಸಿರಿಶಾಗೆ ನೇಮಕಾತಿ ಪತ್ರ ವಿತರಿಸಿದರು. ಟಿಎಸ್‌ಎಸ್‌ಪಿಡಿಸಿಎಲ್‌ನಲ್ಲಿ ಮೊದಲ ಮಹಿಳಾ ಲೈನ್‌ಮೆನ್ ಆಗಿರುವುದು ಸಂತಸ ತಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!