ಗೆಳೆಯನಿಗಾಗಿ ಬೆಂಗಳೂರಿಗೆ ಬಂದ ಜೂನಿಯರ್ ಎನ್​ಟಿಆರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕನ್ನಡ ರಾಜ್ಯೋತ್ಸವ ದಿನದ ಸಂಭ್ರಮಕ್ಕೆ ವಿಧಾನಸೌಧದಲ್ಲಿ ಸಕಲ ಸಿದ್ದತೆಗಳು ನಡೆಯುತ್ತಿದ್ದು, ನಾಳೆ ಪುನೀತ್ ರಾಜ್‍ಕುಮಾರ್​ ಅವರಿಗೆ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಿದೆ. ಪುನೀತ್ ಅವರ ಪತ್ನಿ ಅಶ್ವಿನಿ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಇಂದು ಟಾಲಿವುಡ್​ ನಟ ಜೂನಿಯರ್ ಎನ್​ಟಿಆರ್ ಬೆಂಗಳೂರಿಗೆ ಆಗಮಿಸಿದ್ದು ಅವರನ್ನು ಡಾ.ರಾಜ್‌ ಕುಟುಂಬದಿಂದ ಯುವ ರಾಜ್​​ಕುಮಾರ್ ಆತ್ಮೀಯವಾಗಿ ಬರಮಾಡಿಕೊಂಡರು.
ಇನ್ನು ಈ ಅದ್ಧೂರಿ ಕಾರ್ಯಕ್ರಮಕ್ಕೆ ಸೂಪರ್ ಸ್ಟಾರ್ ನಟ ರಜನಿಕಾಂತ್ ಕೂಡ ಹಾಜರಾಗಲಿದ್ದಾರೆ.
ಪುನೀತ್​​ ರಾಜ್​​ಕುಮಾರ್ ಹಾಗೂ ಜೂನಿಯರ್ ಎನ್​ಟಿಆರ್ ಆತ್ಮೀಯ ಗೆಳೆಯರು. ಈ ಮಾತನ್ನು ಇಬ್ಬರೂ ಸಾಕಷ್ಟು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದುಂಟು. ವಾರಕ್ಕೆ ಒಂದು ಸಲವಾದರೂ ಇಬ್ಬರು ಫೋನ್ ಮಾಡಿ ಮಾತನಾಡುವ ಮಟ್ಟಿಗೆ ಆತ್ಮೀಯ ಗೆಳೆಯರಾಗಿದ್ದರು. ಈ ಸ್ನೇಹವೇ ಅಪ್ಪು ನಿಧನರಾದಾಗ ಎನ್​ಟಿಆರ್ ಬೆಂಗಳೂರಿಗೆ ಬಂದು ಗೆಳಯನ ಅಂತಿಮ ದರ್ಶನ ಪಡೆದಿದ್ದರು. ಈಗ ರಾಜ್ಯ ಸರ್ಕಾರ ತನ್ನ ಗೆಳೆಯನಿಗೆ ಕೊಡುತ್ತಿರುವ ಕರ್ನಾಟಕ ರತ್ನ ಪ್ರಶಸ್ತಿ ಕಾರ್ಯಕ್ರಮಕ್ಕೂ ಅವರು ಸಾಕ್ಷಿಯಾಗಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!