ರಾಜ್ಯೋತ್ಸವಕ್ಕೆ ಸಿಹಿ ಸುದ್ದಿ ಕೊಟ್ಟ ಮೆಟ್ರೋ: ನಾಳೆಯಿಂದ ಮೊಬೈಲ್​ನಲ್ಲೇ ಟಿಕೆಟ್​ ಖರೀದಿಸಲು ಅವಕಾಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕನ್ನಡ ರಾಜ್ಯೋತ್ಸವ ಹಿನ್ನೆಲೆ ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಗುಡ್​ ನ್ಯೂಸ್​ ನೀಡಿದೆ. ಇನ್ನು ಮುಂದೆ ಪ್ರಯಾಣಿಕರು ಮೊಬೈಲ್​ನಲ್ಲೇ ಮೆಟ್ರೋ ಪ್ರಯಾಣದ ಟಿಕೆಟ್​ ಖರೀದಿಸಲು ಅವಕಾಶ ನೀಡಲಾಗಿದೆ.

ಕ್ಯೂಆರ್ ಕೋಡ್ ಮೂಲಕ ಪ್ರಯಾಣಿಕರು ನಮ್ಮ‌ ಮೆಟ್ರೋದಲ್ಲಿ ಮಂಗಳವಾರದಿಂದ ಪ್ರಯಾಣ ಬೆಳಸಬಹುದಾಗಿದೆ. ಪ್ರಯಾಣಿಕರ ಸಮಯ ಉಳಿತಾಯ, ಚಿಲ್ಲರೆ ಸಮಸ್ಯೆ ದೂರಮಾಡುವ ಉದ್ದೇಶದಿಂದ ಈ ಹೊಸ ಯೋಜನೆಯನ್ನು ಪ್ರಾರಂಭಿಸಿದೆ.

ಇದರಿಂದ ಸ್ಮಾರ್ಟ್ ಫೋನ್ ಹೊಂದಿರುವ ಮೆಟ್ರೋ ಪ್ರಯಾಣಿಕರು ಟೋಕನ್ ಖರೀದಿಸಲು ಟಿಕೆಟ್‌ ಕೌಂಟರ್‌ಗಳ ಮುಂದೆ ನಿಲ್ಲುವ ಅಗತ್ಯ ವಿರುವುದಿಲ್ಲ. ಕ್ಯೂಆರ್ ಟಿಕೆಟ್‌ಗಳನ್ನು ಆನ್‌ಲೈನ್‌ ಮೂಲಕ ಖರೀದಿಸಬಹುದು. ಕ್ಯೂಆರ್ ಟಿಕೆಟ್‌ಗಳನ್ನು ಖರೀದಿಸಲು ಪ್ರಯಾಣಿಕರು ಆಂಡ್ರಾಯ್ಡ್ ಓಎಸ್ ಹೊಂದಿರುವ ಮೊಬೈಲ್​ನಿಂದ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ತಮ್ಮನ್ನು ನೋಂದಾಯಿಸಿಕೊಳ್ಳಬಹುದು.

ಅಧಿಕೃತ ಬಿಎಂಆರ್‌ಸಿಎಲ್ ನ WhatsApp ಚಾಟ್‌ಬಾಟ್ ಮೊಬೈಲ್ ನಂ 810 555 66 77 ಅನ್ನು ಮೊಬೈಲ್ ನಲ್ಲಿ ಸೇವ್ ಮಾಡಿ, “ಹಾಯ್” ಎಂಬ ಸಂದೇಶವನ್ನು ಕಳುಹಿಸುವ ಮೂಲಕ QR ಟಿಕೆಟ್‌ಗಳನ್ನು ಖರೀದಿಸಲು ಚಾಟ್‌ಬಾಟ್‌ ನೊಂದಿಗೆ ಸಂವಹನವನ್ನು ಪ್ರಾರಂಭಿಸಬಹುದು. ಆಂಡ್ರಾಯ್ಡ್ ಮತ್ತು ಐಒಎಸ್ ಮೊಬೈಲ್ ಬಳಕೆದಾರರಿಗೆ ಚಾಟ್‌ಬಾಟ್ (Chatbot) ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಗಳಲ್ಲಿ ಲಭ್ಯವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!