ಕಿರಿಯರ ವಿಶ್ವಕಪ್ ಸೆಮಿಫೈನಲ್: ಭಾರತಕ್ಕೆ ಆಸೀಸ್ ಎದುರಾಳಿ

ದಿಗಂತ ಡಿಜಿಟಲ್ ಡೆಸ್ಕ್

ಕಿರಿಯರ ವಿಶ್ವಕಪ್‌ನ ಸೆಮಿಫೈನಲಿನಲ್ಲಿ ಇಂದು ಭಾರತವು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಭಾರತೀಯ ಕಾಲಮಾನ ರೀತ್ಯಾ ಸಂಜೆ 6.30ಕ್ಕೆ ಪಂದ್ಯವು ಆರಂಭಗೊಳ್ಳಲಿದೆ.
ಭಾರತವು ಸತತ ನಾಲ್ಕನೇ ಬಾರಿ ಕಿರಿಯರ ವಿಶ್ವಕಪ್‌ನ ಫೈನಲಿಗೇರುವ ಗುರಿ ಇರಿಸಿಕೊಂಡಿದೆ. ಕಳೆದ ವಿಶ್ವಕಪ್‌ನಲ್ಲಿ ಭಾರತವು ಬಾಂಗ್ಲಾದೆದುರು ಫೈನಲಿನಲ್ಲಿ ಸೋತಿತ್ತು.
ಭಾರತವು ಈವರೆಗೆ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದು ಸೆಮಿಫೈನಲಿಗೇರಿದೆ. ಎಲ್ಲಿಯೂ ಅದು ಪಂದ್ಯ ಗೆಲ್ಲಲು ಕಷ್ಟಪಡಬೇಕಾಗಿ ಬಂದಿಲ್ಲ. ಆದರೆ ಇಂದಿನ ಸೆಮಿಫೈನಲಿನಲ್ಲಿ ಮಾತ್ರ ಆಸ್ಟ್ರೇಲಿಯಾ ಕಠಿಣ ಸವಾಲು ಒಡ್ಡುವ ನಿರೀಕ್ಷೆಯಿದೆ.
ನಿನ್ನೆ ನಡೆದ ಇನ್ನೊಂದು ಸೆಮಿಪೈನಲಿನಲ್ಲಿ ಇಂಗ್ಲೆಂಡ್ ತಂಡವು ಅಫಘಾನಿಸ್ಥಾನವನ್ನು ಸೋಲಿಸಿ ಫೈನಲಿಗೇರಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!