ಅಕ್ರಮ ಗೋವುಗಳ ಮಾರಾಟ, ಸಾಗಾಟಕ್ಕೆ ನಿಯಂತ್ರಣ ಹೇರಲು ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ

ಹೊಸ ದಿಗಂತ ವರದಿ, ಮೈಸೂರು:

ಅಕ್ರಮ ಗೋವುಗಳ ಸಾಗಾಟ ಹಾಗೂ ಮಾರಾಟ ಚಟುವಟಿಕೆಗಳನ್ನು ಮಟ್ಟ ಹಾಕಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.
ಬುಧವಾರ ಮೈಸೂರಿನ ಪೊಲೀಸ್ ಜಿಲ್ಲಾ ಘಟಕದ ಪರಾಮರ್ಶನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಇತ್ತೀಚೆಗೆ, ಆನ್ಲೈನ್ ಗ್ಯಾಂಬಲಿoಗ್ ನಿಷೇಧಿಸಿ ಕಾನೂನನ್ನು ತಂದಿದ್ದು ಅದನ್ನು ನಿರ್ದಾಕ್ಷಿಣ್ಯವಾಗಿ, ಜಾರಿಗೆ ತರಬೇಕು ಗ್ಯಾಂಬಲಿoಗ್ ಮತ್ತು ಮಟ್ಕಾ ಅಂಥಹ ದುರ್ವ್ಯವಹಾರ ಕ್ಕೆ ಅವಕಾಶ ನೀಡಬಾರದು ಎಂದು ನಿರ್ದೇಶನ ನೀಡಿದರು. .
ಮೈಸೂರು ಜಿಲ್ಲೆಯ ಕೆಲವು ಭಾಗಗಳಲ್ಲಿ, ಅಕ್ರಮ ಗೋವುಗಳ ಮಾರಾಟ ಹಾಗೂ ಸಾಗಾಟ ಚಟುವಟಿಕೆ ಗಳ, ಬಗ್ಗೆ ಮಾಹಿತಿಯಿದೆ, ಅದನ್ನು ತಕ್ಷಣವೇ, ನಿಲ್ಲಿಸಬೇಕು, ಮತ್ತು, ನೆರೆಯ ರಾಜ್ಯ ಕೇರಳ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಅನ್ನು ಬಿಗಿಗೊಳಿಸಿ, ಕ್ರಮ ತೆಗೆದುಕೊಳ್ಳಿ ಎಂದು ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿರುವ ಬಗ್ಗೆ ದೂರುಗಳಿದ್ದು, ತಕ್ಷಣವೇ ಅಂಥವರನ್ನು ಗುರುತಿಸಿ, ಕಾನೂನು ಕ್ರಮ ಜರುಗಿಸಲು ವಿಫಲವಾದರೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.
ಜಿಲ್ಲೆಯಲ್ಲಿ ಮಟ್ಕಾ ದಂಧೆ ನಿಲ್ಲಿಸಲಾಗಿದೆ, ಜಿಲ್ಲಾ ವ್ಯಾಪ್ತಿಯಲ್ಲಿ, ಗ್ಯಾಂಬ್ಲಿoಗ್, ಕ್ರಿಕೆಟ್ ಬೆಟ್ಟಿಂಗ್, ಆನ್ಲೈನ್ ಗೇಮ್ಸ್ ಗಳು ಬಂದ್ ಆಗಿವೆ, ಕ್ಲಬ್ ಗಳ ನಿಯಂತ್ರಣ ಮಾಡಲಾಗಿದೆ ಎಂದು ಸಭೆ ಅಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಮುಖ್ಯಸ್ಥ ಆರ್ ಚೇತನ್, ಮೈಸೂರು ಪೊಲೀಸ್ ಆಯುಕ್ತ ಚಂದ್ರಗುಪ್ತ, ಐಜಿ ಪ್ರವೀಣ್ ಮಧುಕರ್ ಪವಾರ್ ಹಾಗೂ ಇನ್ನಿತರ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!