ನೀವು ಜಂಕ್ ಫುಡ್ ಸೇವಿಸುತ್ತಿದ್ದೀರಾ…?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಯುವಜನತೆಗೆ ಜಂಕ್ ಫುಡ್ ಅಂದರೆ ಒಂದು ಟ್ರೆಂಡ್. ಆರೋಗ್ಯಕ್ಕಿಂತಲೂ ಎಲ್ಲರೊಂದಿಗೆ ಬೆರೆತು ಜಂಕ್ ಫುಡ್ ಸೇವಿಸುವುದೇ ಒಂದು ಫ್ಯಾಶನ್ ಆಗಿದೆ. ಈ ಜಂಕ್ ಫುಡ್ ನಮ್ಮ ಆರೋಗ್ಯಕ್ಕೆ ಕೊಳ್ಳಿ ಇಡುವುದಷ್ಟೇ ಅಲ್ಲದೆ ಜೀವಕ್ಕೆ ಅಪಾಯ ತಂದೊಡ್ಡುತ್ತದೆ. ನೋಡಲು ಆಕರ್ಷಕವಾಗಿರುವ, ಸೇವಿಸಲು ರುಚಿಯಾಗಿರುವ ಈ ಜಂಕ್ ಫುಡ್ ಆರೋಗ್ಯಕ್ಕೆ ತೀವ್ರ ಹೊಡೆತ ನೀಡುತ್ತದೆ. ಜಂಕ್ ಫುಡ್ ಅಧಿಕ ಸೇವನೆ ಮಾಡುವ ಮಂದಿಯಲ್ಲಿ ಕೈ-ಕಾಲು, ಯಕೃತ್ ಮತ್ತು ಕರುಳ ಸಮಸ್ಯೆಗಳು ಅಧಿಕವಾಗಿ ಕಾಣಿಸಿಕೊಳ್ಳುತ್ತವೆ. ಕೊಬ್ಬು ಶೇಖರಣೆಯಾಗಿ ಅಧಿಕ ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್ ಸಮಸ್ಯೆಗಳು ತಲೆದೋರುತ್ತವೆ. ಇತ್ತೀಚೆನ ಸಂಶೋಧನೆಯ ಪ್ರಕಾರ ಮಕ್ಕಳ ಸ್ಥೂಲ ಕಾಯಕ್ಕೆ ಜಂಕ್ ಫುಡ್ ಪ್ರಮುಖ ಕಾರಣವಾಗಿದೆಯಂತೆ.

ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್‍ಮೆಂಟ್ ಸಂಸ್ಥೆಯು 2019 ರಲ್ಲಿ ಮಕ್ಕಳ ಮೇಲೆ ನಡೆಸಿದ ಸಮೀಕ್ಷೆ ಈ ಸತ್ಯವನ್ನು ಬಯಲು ಮಾಡಿದೆ. ಜಂಕ್ ಫುಡ್ ಬದಲಿಗೆ ಮನೆಯಲ್ಲಿ ಶುಚಿ ರುಚಿಯಾಗಿ ಮಾಡಿದ ಪೌಷ್ಠಿಕಾಹಾರ ಸೇವಿಸುವುದು ಉತ್ತಮ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!