SKIN CARE | ಈ ಐದು ವಿಚಾರಗಳನ್ನು ಗಮನದಲ್ಲಿಟ್ರೆ ಸಾಕು, ಆರೋಗ್ಯಕರ, ಗ್ಲೋಯಿಂಗ್ ತ್ವಚೆ ನಿಮ್ಮದಾಗುತ್ತದೆ..

ಗ್ಲೋಯಿಂಗ್ ಸ್ಕಿನ್‌ಗಾಗಿ ಏನೆಲ್ಲಾ ಮಾಡಿಲ್ಲ? ದುಬಾರಿ ಕ್ರೀಂಗಳ ಬಳಕೆ. ಆಸ್ಪತ್ರೆ ಅಲೆದದ್ದೂ ಆಗಿದೆ. ಆದರೆ ಚರ್ಮ ಆರೋಗ್ಯಕರವಾಗಿದ್ದರೆ, ಗ್ಲೋ ತಾನಾಗಿಯೇ ಕಾಣಿಸುತ್ತದೆ. ಈ ಐದು ಸ್ಟೆಪ್ಸ್ ಗಮನದಲ್ಲಿರಲಿ…

  1. ಸೂರ್ಯನಿಂದ ದೂರ ಇರಿ
    ಆದಷ್ಟು ಬೆಳಗ್ಗೆ 11 ರಿಂದ ಸಂಜೆ 4 ರವರೆಗೆ ನೇರ ಸೂರ್ಯನ ಕಿರಣಗಳಿಗೆ ಮೈಒಡ್ಡಬೇಡಿ. ಮನೆಯಲ್ಲಿದ್ದರೂ ಸನ್‌ಸ್ಕ್ರೀನ್ ಕಡ್ಡಾಯ.
  2. ಧೂಮಪಾನ ನಿಲ್ಲಿಸಿ
    ಆರೋಗ್ಯವೂ ಚೆನ್ನಾಗಿರಬೇಕು, ಧೂಮಪಾನವೂ ಮಾಡಬೇಕು ಎಂದರೆ ಅಸಾಧ್ಯ, ಆರೋಗ್ಯ ಅಥವಾ ಕೆಟ್ಟ ಚಟ? ಒಂದನ್ನು ಮಾತ್ರ ಆಯ್ಕೆ ಮಾಡಿ.
  3. ಚರ್ಮದ ಮೇಲೆ ಕಾಳಜಿ ಇರಲಿ
    ಸೋಪು ಹಾಕಿ ಗಸಗಸ ಮುಖ ತಿಕ್ಕುವುದು, ರಫ್ ಆದ ಟವಲ್‌ನಿಂದ ಮುಖ ಉಜ್ಜುವುದು, ಮುಖಕ್ಕೆ ಏನೂ ಹಚ್ಚದೇ ಇರುವುದು, ಅತಿಯಾದ ಸಮಯ ಸ್ನಾನ ಮಾಡುವುದು ಇದನ್ನೆಲ್ಲಾ ಈಕೂಡಲೇ ನಿಲ್ಲಿಸಿ.
  4. ಆರೋಗ್ಯಕರ ಆಹಾರ
    ಊಟ ತಿಂಡಿ ಮೇಲೆ ಗಮನ ಇರಲಿ,ದಿನವೂ ಜಂಕ್ ಫುಡ್ ತಿಂದು ಆರೋಗ್ಯಕರ ಚರ್ಮ ಬೇಕು ಎಂದರೆ ಅಸಾಧ್ಯ ಅಲ್ವಾ?
  5. ಒತ್ತಡವೇ ಶತ್ರು
    ನಿಮಗೆ ಕ್ಲಿಯರ್ ಸ್ಕಿನ್ ಇಲ್ಲದಿರಲು ಒತ್ತಡವೂ ಒಂದು ಕಾರಣವಾಗಿರಬಹುದು. ನಿದ್ದೆ ಇಲ್ಲದಿರುವುದು, ಒತ್ತಡದ ಜೀವನಶೈಲಿಯನನ್ನು ಆದಷ್ಟು ದೂರ ಇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!