ಸೂರ್ಯನತ್ತ ಇಸ್ರೋ ಚಿತ್ತ: ಆದಿತ್ಯ ಎಲ್‌-1 ಉಡಾವಣೆಗೆ ಕ್ಷಣಗಣನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಐತಿಹಾಸಿಕ ಹೆಜ್ಜೆ ಇಡಲು ಇಸ್ರೋ ಮುಂದಾಗಿದೆ. ಸೂರ್ಯನ ಬಾಹ್ಯ ವಾತಾವರಣದ ಅಧ್ಯಯನಕ್ಕಾಗಿ ‘ಆದಿತ್ಯ-ಎಲ್‌ 1’ ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಈಗಾಗಲೇ ಸಕಲ ಸಿದ್ಧತೆಗಳನ್ನು ಇಸ್ರೋ ಮಾಡಿಕೊಂಡಿದೆ.

ಈ ಕುರಿತು ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿರುವ ಇಸ್ರೋ,ʼಶನಿವಾರ ಬೆಳಿಗ್ಗೆ (ಸೆ.2) 11.50ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಆದಿತ್ಯ ಎಲ್‌-1 ಉಪಗ್ರಹ ಹೊತ್ತ ಪಿಎಸ್‌ಎಲ್‌ವಿ-ಸಿ 57 ರಾಕೆಟ್ ನಭಕ್ಕೆ ಚಿಮ್ಮಲಿದೆʼ ಎಂದು ಹೇಳಿದೆ.

ಉಡಾವಣಾ ಪೂರ್ವಾಭ್ಯಾಸ ಮತ್ತು ವಾಹನದ ಆಂತರಿಕ ಪರೀಕ್ಷೆಗಳನ್ನು ಇಸ್ರೊ ಪೂರ್ಣಗೊಳಿಸಿದ್ದು, ಉಡಾವಣೆಗೆ ಸಿದ್ಧವಾಗಿದೆ.

ಸೂರ್ಯನ ಅಧ್ಯಯನ ಮಾಡಲು ಇಸ್ರೋ ಕೈಗೊಂಡಿರುವ ಚೊಚ್ಚಲ ಯೋಜನೆ ಇದಾಗಿದ್ದು, ಒಟ್ಟು ಏಳು ಉಪಕರಣಗಳನ್ನು (ಪೇಲೋಡ್‌) ಇದು ಹೊತ್ತೊಯ್ಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!