ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಪ್ರತಾಪ್‌ಗಢ ಜಿಲ್ಲೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆಕೆಗೆ ಪರೀಕ್ಷೆಗೆ ಹಾಜರಾಗದಂತೆ ಶಾಲಾ ಆಡಳಿತ ಮಂಡಳಿಯುತಡೆದಿದ್ದು, ಜೊತೆಗೆ ಶುಲ್ಕ ಪಾವತಿಸದಿದ್ದಕ್ಕಾಗಿ ಅವಮಾನಿಸಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಪ್ರತಾಪ್‌ಗಢದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ರಿಯಾ ಪ್ರಜಾಪತಿ (17) 800 ರೂ. ಬಾಕಿ ಶುಲ್ಕವನ್ನು ಪಾವತಿಸದ ಕಾರಣ ಶಾಲೆಯು ಪ್ರವೇಶ ಪತ್ರವನ್ನು ನಿರಾಕರಿಸಿತು. ಶನಿವಾರ ಪರೀಕ್ಷೆ ಬರೆಯಲು ಶಾಲೆಗೆ ಹೋದಾಗ ಕಾಲೇಜು ವ್ಯವಸ್ಥಾಪಕರು , ಪ್ರಾಂಶುಪಾಲರು, ಶಿಕ್ಷಕರು ಆಕೆಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲ. ಇದರಿಂದ ಮನನೊಂದು ವಿದ್ಯಾರ್ಥಿನಿ ಮನೆಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಕುರಿತು ರಿಯಾಳ ತಾಯಿ ಪೂನಂ ದೇವಿ ಪೊಲೀಸರಿಗೆ ದೂರು ನೀಡಿದ್ದು, ಶುಲ್ಕ ಪಾವತಿಸದಿದ್ದರೆ ಆಕೆಯ ಭವಿಷ್ಯ ಹಾಳಾಗುತ್ತದೆ ಎಂದು ಶಾಲಾ ಸಿಬ್ಬಂದಿ ಮಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.