ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ಜಸ್ಟಿಸ್ ಫಾರ್ ನೇಹಾ: ಸಾಗರದಾಚೆಗೂ ಸದ್ದು ಮಾಡಿದ ಹುಬ್ಬಳ್ಳಿ ಮರ್ಡರ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರೀ ತಲ್ಲಣ ಮೂಡಿಸಿರುವ ಹುಬ್ಬಳ್ಳಿಯ ಕಾಂಗ್ರೆಸ್ ಕೌನ್ಸಿಲರ್ ನಿರಂಜನ್ ಹಿರೇಮಠ್ ಪುತ್ರಿ ನೇಹಾ ಹಿರೇಮಠ್ ಅಮಾನುಷ ಸಾವಿಗೆ ಅಮೆರಿಕದಲ್ಲೂ ಕಂಬನಿ ಕಂಡಿದೆ.

ನೇಹಾಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಜಸ್ಟಿಸ್ ಫಾರ್ ನೇಹಾ, ಲವ್ ಜಿಹಾದ್ ನಿಲ್ಲಿಸಿ, ಸೇವ್ ಹಿಂದೂ ಗರ್ಲ್ ಪೋಸ್ಟರ್‌ಗಳನ್ನು ಪ್ರದರ್ಶಿಸಿದ್ದಾರೆ. ಜೊತೆಗೆ ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ಕೂಡಾ ನೇಹಾ ಭಾವಚಿತ್ರವನ್ನು ಪ್ರದರ್ಶಿಸಲಾಗಿದೆ.
ನೇಹಾ ಕೊಲೆ ಪ್ರಕರಣ ಖಂಡಿಸಿ ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿ ನ್ಯೂಜೆರ್ಸಿ ಸಹಿತ ವಿವಿಧ ಕಡೆಗಳಲ್ಲಿ ಜಸ್ಟಿಸ್ ಫಾರ್ ನೇಹಾ ಹಿರೇಮಠ್ ರ್‍ಯಾಲಿ ನಡೆದಿದೆ. ಇದರೊಂದಿಗೆ ಜಾಗತಿಕ ಮಟ್ಟದಲ್ಲಿಯೂ ನೇಹಾ ಮರ್ಡರ್ ಸದ್ದು ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!