ಬಾಹ್ಯಾಕಾಶ ಸಂಶೋಧನೆ: ಇಸ್ರೋ ಸಾಧನೆಗೆ ಖಾಸಗಿ ಕ್ಷೇತ್ರಗಳಿಂದಲೂ ಸಿಗಲಿದೆ ಸಾಥ್

ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಹ್ಯಾಕಾಶ ತಂತ್ರಜ್ಞಾನ ಸಂಶೋಧನೆಯ ವೇಗ ಇನ್ನಷ್ಟು ಚುರುಕುಗೊಳಿಸಲು ಭಾರತದ ಹೆಮ್ಮೆಯ ಇಸ್ರೋ ನಿರ್ಧರಿಸಿದೆ.
ಈ ಬಗ್ಗೆ ಬೆಂಗಳೂರಿನಲ್ಲಿ ಹಮ್ಮಿಕೊಂಡ ಇನ್‌ಸ್ಟಾಗ್ರಾಂ ಸಂವಾದದಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್, ಖಾಸಗಿ ಕ್ಷೇತ್ರದ ನೆರವು ಕೂಡಾ ಇದಕ್ಕೆ ಸಿಗಲಿದ್ದು, ಹಲವು ಸಾಧನೆಗಳು ಮುಂದಿನ ದಿನಗಳಲ್ಲಿ ನಾವು ಕಾಣಬಹುದಾಗಿದೆ ಎಂದಿದ್ದಾರೆ.
ವಿವಿಧ ದೇಶಗಳಲ್ಲಿನ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಕ್ಕೆ ’ಸ್ಪೇಸ್‌ಎಕ್ಸ್’ ಸಂಸ್ಥೆ ಕೊಡುಗೆ ನೀಡುತ್ತಿದೆ ಎಂಬ ಪ್ರೇಕ್ಷಕರ ಉಲ್ಲೇಖಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮಲ್ಲೂ ಈ ಬೆಳವಣಿಗೆ ಶೀಘ್ರವೇ ನಡೆಯಲಿದೆ ಎಂದಿದ್ದಾರೆ.
ರಾಕೆಟ್ ಎಂಜಿನ್‌ಗಳ ತಯಾರಿಕೆಯಲ್ಲಿ ಸ್ಪೇಸ್‌ಎಕ್ಸ್ ಅಮೆರಿಕಗೆ ಹೆಚ್ಚಿನ ನೆರವು ನೀಡುತ್ತಿದೆ. ಆ ನಡೆಯನ್ನು ಭಾರತವೂ ಮಾನವ ಚಾಲಿತ ವೈಮಾನಿಕ ವಾಹನಗಳ ತಯಾರಿಕೆಯಲ್ಲಿ ಅನುಸರಿಸಲು ಸಾಧ್ಯವಿದೆ ಎಂದು ಅವರು ಇದೇ ಸಂದರ್ಭ ಪ್ರತಿಪಾದಿಸಿದ್ದಾರೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!