ಜಸ್ಟಿನ್ ಟ್ರುಡೊಗೆ ಶಾಕ್: ಕೆನಡಾ ಉಪ ಪ್ರಧಾನಿ ಕ್ರಿಸ್ಟಿಯಾ ರಾಜೀನಾಮೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕೆನಡಾ ದೇಶದ ಮೊದಲ ಆರ್ಥಿಕ ಯೋಜನೆಯನ್ನು ಬಿಡುಗಡೆ ಮಾಡುವ ಕೆಲವೇ ಗಂಟೆಗಳ ಮೊದಲು ಉಪಪ್ರಧಾನಿ ಕ್ರಿಸ್ಟಿಯಾ ಫ್ರೀಲ್ಯಾಂಡ್ ಇಂದು ರಾಜೀನಾಮೆ ನೀಡಿದ್ದಾರೆ.

ಈ ನಿರ್ಧಾರದಿಂದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊಗೆ ದೊಡ್ಡ ಹಿನ್ನಡೆಯಾಗಿದೆ.

ಕೆನಡಾದ ಉಪ ಪ್ರಧಾನ ಮಂತ್ರಿ ಕ್ರಿಸ್ಟಿಯಾ ಫ್ರೀಲ್ಯಾಂಡ್ ಅನಿರೀಕ್ಷಿತವಾಗಿ ತಮ್ಮ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದರು. ಉಪಪ್ರಧಾನಿ ಹುದ್ದೆಯ ಜೊತೆಗೆ ಹಣಕಾಸು ಖಾತೆಯನ್ನು ಹೊಂದಿದ್ದ ಫ್ರೀಲ್ಯಾಂಡ್, ವರ್ಷಗಳ ಕಾಲ ಟ್ರೂಡೊ ಸರ್ಕಾರದಲ್ಲಿ ಅತ್ಯಂತ ಶಕ್ತಿಶಾಲಿ ಸಚಿವರಾಗಿದ್ದರು. ಕಳೆದ 4 ವರ್ಷಗಳಲ್ಲಿ ಸರ್ಕಾರದಿಂದ ಹೊರಬಂದ ಎರಡನೇ ಹಣಕಾಸು ಸಚಿವೆ ಇವರಾಗಿದ್ದಾರೆ.

ಕೆನಡಾದ ಎಲ್ಲಾ ಸರಕುಗಳು ಮತ್ತು ಸೇವೆಗಳ ಮೇಲೆ 25% ಲೆವಿಯನ್ನು ಸ್ಲ್ಯಾಪ್ ಮಾಡುವುದಾಗಿ ಡೊನಾಲ್ಡ್ ಟ್ರಂಪ್ ಕಳೆದ ತಿಂಗಳು ನೀಡಿದ ಹೇಳಿಕೆಯಿಂದ ಕೆನಡಾ ಮತ್ತು ಯುಎಸ್ ನಡುವಿನ ಸಂಬಂಧ ಹಳಸಿದೆ.

ನಮ್ಮ ದೇಶ ಇಂದು ಗಂಭೀರ ಸವಾಲನ್ನು ಎದುರಿಸುತ್ತಿದೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿನ ಆಡಳಿತವು ಆಕ್ರಮಣಕಾರಿ ಆರ್ಥಿಕ ರಾಷ್ಟ್ರೀಯತೆಯ ನೀತಿಯನ್ನು ಅನುಸರಿಸುತ್ತಿದೆ. ಇದರಲ್ಲಿ 25% ಸುಂಕಗಳ ನೀತಿಯೂ ಸೇರಿದೆ. “ನಾವು ಆ ಬೆದರಿಕೆಯನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ” ಎಂದು ಅವರು ಹೇಳಿದ್ದಾರೆ.

ಕೆನಡಾದ ಉಪ ಪ್ರಧಾನ ಮಂತ್ರಿಯಾಗಿದ್ದ ಕ್ರಿಸ್ಟಿಯಾ ಫ್ರೀಲ್ಯಾಂಡ್, ಟ್ರುಡೊ ಇನ್ನು ಮುಂದೆ ನಾನು ಹಣಕಾಸು ಸಚಿವೆಯಾಗಿ ಸೇವೆ ಸಲ್ಲಿಸುವುದಿಲ್ಲ ಮತ್ತು ಅವರು ಕ್ಯಾಬಿನೆಟ್‌ನಲ್ಲಿ ಬೇರೆ ಪಾತ್ರವನ್ನು ನೀಡುವುದಾಗಿ ಶುಕ್ರವಾರ ಹೇಳಿದ್ದಾರೆ. ಶುಕ್ರವಾರ ನೀವು ಇನ್ನು ಮುಂದೆ ನಾನು ನಿಮ್ಮ ಹಣಕಾಸು ಸಚಿವೆಯಾಗಿ ಸೇವೆ ಸಲ್ಲಿಸಲು ಬಯಸುವುದಿಲ್ಲ ಎಂದು ನನಗೆ ಹೇಳಿದ್ದೀರಿ. ನನಗೆ ಕ್ಯಾಬಿನೆಟ್‌ನಲ್ಲಿ ಮತ್ತೊಂದು ಸ್ಥಾನವನ್ನು ನೀಡಿದ್ದೀರಿ ಎಂದು ಫ್ರೀಲ್ಯಾಂಡ್ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದ ಟ್ರುಡೊಗೆ ಬರೆದ ಪತ್ರದಲ್ಲಿ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಕ್ರಿಸ್ಟಿಯಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!