ಯುವೆಂಟಸ್ ಫುಟ್ಬಾಲ್ ತಾರೆ ಪೌಲ್ ಪೋಗ್ಬಾ 4 ವರ್ಷ ಬ್ಯಾನ್‌

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಯುವೆಂಟಸ್ ತಂಡದ ತಾರಾ ಆಟಗಾರ ಪೌಲ್ ಪೋಗ್ಬಾ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲವಾಗಿದ್ದಾರೆ. ಇದರ ಬೆನ್ನಲ್ಲೇ 4 ವರ್ಷಗಳ ಮಟ್ಟಿಗೆ ಫುಟ್ಬಾಲ್‌ನಿಂದ ಬ್ಯಾನ್ ಆಗಿದ್ದಾರೆ .

ಯುವೆಂಟಸ್ ತಂಡವು ಉಡಿನೀಸ್ ವಿರುದ್ದದ ಉದ್ಘಾಟನಾ ಪಂದ್ಯದಲ್ಲಿ 30 ವರ್ಷದ ಮ್ಯಾಂಚೆಸ್ಟರ್ ಯುನೈಟೆಡ್‌ನ ಮಾಜಿ ಆಟಗಾರನ ಟೆಸ್ಟೋಸ್ಟೆರಾನ್‌ ಪರೀಕ್ಷೆಯಲ್ಲಿ ಪಾಸಿಟಿವ್ ರಿಪೋರ್ಟ್ ಬಂದಿದೆ. ಇದರ ಬೆನ್ನಲ್ಲೇ ಇಟಲಿಯ ಡೋಪಿಂಗ್ ವಿರೋಧಿ ಪ್ರಾಸಿಕ್ಯೂಟರ್ ಕಚೇರಿಯು ದಂಡ ವಿಧಿಸಿದೆ.

ಪೌಲ್ ಪೋಗ್ಬಾ ಅವರ ಕಾನೂನು ತಂಡವು ಈ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದು, ಅವರು ಡೋಪಿಂಗ್ ಪಾಸಿಟಿವ್ ಬರುವ ವಸ್ತುವನ್ನು ಅಜಾಗಾರೂಕತೆಯಿಂದ ಸೇವಿಸಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ. ಇದಷ್ಟೇ ಅಲ್ಲದೇ ತಮ್ಮ ಪರವಾಗಿರುವ ಕ್ಲೈಂಟ್‌ಗೆ ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸಬೇಕು ಎಂದು ಮನವಿ ಸಲ್ಲಿಸಿದ್ದರು. ಆದರೆ ಪೌಲ್ ಪೋಗ್ಬಾ ಅವರ ಪರ ವಾದವನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದು, ಈ ಬ್ಯಾನ್‌ನಿಂದಾಗಿ ಪೌಲ್ ಪೋಗ್ಬಾ ಅವರ ವೃತ್ತಿಬದುಕು ಬಹುತೇಕ ಅಂತ್ಯವಾದಂತೆ ಆಗಿದೆ.

ಪೌಲ್ ಪೋಗ್ಬಾ ಅವರು ನಿಷೇಧಕ್ಕೆ ಒಳಗಾಗಿರುವುದು ಅವರ ವರ್ಣರಂಜಿತ ಫುಟ್ಬಾಲ್ ಬದುಕಿಗೆ ಒಂದು ಕಪ್ಪುಚುಕ್ಕೆಯಾಗಿದ್ದು ಮಾತ್ರವಲ್ಲದೇ, ಯುವೆಂಟಸ್ ತಂಡಕ್ಕೆ ಸೀರಿ ಎ ಲೀಗ್‌ನಲ್ಲಿ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.

13 ಬಾರಿ ಪ್ರೀಮಿಯರ್ ಲೀಗ್ ಚಾಂಪಿಯನ್ ತಂಡವನ್ನು ತೊರೆದು 2022ರಲ್ಲಿ ತಮ್ಮ ವೃತ್ತಿಜೀವನವನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಉಚಿತವಾಗಿಯೇ ಯುವೆಂಟಸ್‌ಗೆ ಸೇರ್ಪಡೆಗೊಂಡಿದ್ದರು. ಇದರ ಹೊರತಾಗಿಯೂ ಅವರ ನಿರೀಕ್ಷೆಯನ್ನು ಸಾಕಾರಗೊಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರ ಮೊದಲ ಋತುವಿನಲ್ಲಿ ಗಾಯದ ಸಮಸ್ಯೆಯಿಂದಾಗಿ ಅವರನ್ನು ತಂಡದಿಂದ ಹೊರಗುಳಿಯುವಂತೆ ಮಾಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!