ಹೊಸದಿಗಂತ ವರದಿ, ಕೆ.ಆರ್. ಪೇಟೆ :
ಜಾನುವಾರುಗಳಿಗೆ ನೀರು ಕುಡಿಸಲು ಹೋದ ಯುವಕನೋರ್ವ ಕಾಲು ಜಾರಿ ನಾಲೆಗೆ ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ನಾಟನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರಾಘವೇಂದ್ರ ಅವರ ಪುತ್ರ ಪ್ರೀತಮ್‌ಗೌಡ ಎಂಬಾತನೇ ಮೃತಪಟ್ಟ ಯುವಕ.
ಜಾನುವಾರುಗಳನ್ನು ಮೇಯಿಸಲು ಹೋಗಿದ್ದ ಪ್ರೀತಮ್ ನೀರು ಕುಡಿಸಲು ನಾಲೆ ಬಳಿ ಕರೆದೊಯ್ದಿದ್ದ. ಈ ವೇಳೆ ಕಾಲು ಜಾರಿ ನಾಲೆಗೆ ಬಿದ್ದು ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾನೆ.
ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಶವವನ್ನು ನಾಲೆಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಿದರು.
ಈ ಸಂಬಂಧ ಕೆ.ಆರ್. ಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.