ಕಾಳಿ ಪೋಸ್ಟರ್‌ ವಿವಾದ: ಲೀನಾ ಮಣಿಮೇಕಲೈಗೆ ಮಧ್ಯಂತರ ರಕ್ಷಣೆ ನೀಡಿದ ಸುಪ್ರೀಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ವಿವಾದಾತ್ಮಕ ಕಾಳಿ ಪೋಸ್ಟರ್‌ ಪ್ರಕರಣದಲ್ಲಿ ವಿವಿಧೆಡೆ ಪೊಲೀಸ್‌ ಕೇಸ್‌ ಎದುರಿಸುತ್ತಿರುವ ಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಮಧ್ಯಂತರ ರಕ್ಷಣೆಯನ್ನು ಒದಗಿಸಿದೆ.

ಕಾಳಿದೇವಿ ಸಿಗರೆಟ್‌ ಸೇದುವ ವಿವಾದಾತ್ಮಕ ಪೋಸ್ಟರ್‌ ಅನ್ನು ಲೀನಾ ಮಣಿಮೇಕಲೈ ಪ್ರಚಾರಕ್ಕೆ ಬಳಸಿಕೊಂಡಿದ್ದರು. ಇದರ ವಿರುದ್ಧ ವಿವಿಧ ರಾಜ್ಯಗಳಲ್ಲಿ ಲೀನಾ ಮಣಿಮೇಕಲೈ ವಿರುದ್ಧ ಪೊಲೀಸ್‌ ಕೇಸ್‌ ದಾಖಲಾಗಿವೆ. ಇದಕ್ಕಾಗಿ ಲೀನಾ ಮಣಿಮೇಕಲೈ ರಕ್ಷಣೆ ಕೋರಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಮತ್ತು ನ್ಯಾಯಮೂರ್ತಿ ಪಿ.ಎಸ್‌.ನರಸಿಂಹ ಅವರಿದ್ದ ನ್ಯಾಯಪೀಠ ಈ ಅರ್ಜಿ ವಿಚಾರಣೆ ನಡೆಸಿ ಲೀನಾ ಮಣಿಮೇಕಲೈಗೆ ಮಧ್ಯಂತರ ರಕ್ಷಣೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!