ಹೊಸದಿಗಂತ ಡಿಜಿಟಲ್ ಡೆಸ್ಕ್:
ಫೆ. 27ರಿಂದ ಮಲೆನಾಡಿನಲ್ಲಿ ವಿಮಾನ ಹಾರಾಟ ಆರಂಭವಾಗಲಿದ್ದು, ಮಲೆನಾಡಿಗರ ಕನಸಾದ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ.
ಪ್ರಧಾನಿ ಮೋದಿ ಶಿವಮೊಗ್ಗದ ನೂತನ ವಿಮಾನ ನಿಲ್ದಾಣ ಉದ್ಘಾಟಿಸಲಿದ್ದಾರೆ. ಶಿವಮೊಗ್ಗ-ಬೆಂಗಳೂರು ನಡುವೆ ಮೊದಲ ವಿಮಾನ ಹಾರಾಟ ನಡೆಯಲಿದೆ.
ಶಿವಮೊಗ್ಗ ವಿಮಾನ ನಿಲ್ದಾಣ ರಾಜ್ಯದ ಅತಿ ದೊಡ್ಡ ರನ್ವೇ ಹೊಂದಿರುವ ಎರಡನೇ ವಿಮಾನ ನಿಲ್ದಾಣ ಆಗಲಿದೆ. ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅತಿ ದೊಡ್ಡ ರನ್ವೇ ಹೊಂದಿದ ಮೊದಲ ವಿಮಾನ ನಿಲ್ದಾಣವಾಗಲಿದೆ. ಒಟ್ಟಾರೆ 449 ಕೋಟಿ ರೂ ವೆಚ್ಚದಲ್ಲಿ ನಿಲ್ದಾಣ ತಯಾರಾಗಿದೆ.