ತೆರೆಗೆ ಬರಲು ಸಜ್ಜಾದ ಕಬ್ಜ: 3500 ಚಿತ್ರಮಂದಿರ, 50 ದೇಶ, 5 ಭಾಷೆಗಳಲ್ಲಿ ರಿಲೀಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಕನ್ನಡದ ಕಳೆದ ಹಲವು ದಿನಗಳಿಂದ ಭಾರೀ ಸದ್ದು ಮಾಡುತ್ತಿರುವ ಸಿನಿಮಾ ಕಬ್ಜ. ಆರ್.ಚಂದ್ರು (R. Chandru) ಮತ್ತು ಮೂವರು ಸ್ಟಾರ್ ನಟರ ಕಾಂಬಿನೇಷನ್ ಮೂಡಿ ಬಂದ ‘ಕಬ್ಜ’ (Kabzaa) ಚಿತ್ರ ನಾಳೆ ವಿಶ್ವದಾದ್ಯಂತ ಮೂರುವರೆ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ (Release) ಆಗುತ್ತಿದೆ.

ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಹೀಗೆ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಈ ಸಿನಿಮಾವನ್ನು ಐವತ್ತು ದೇಶಗಳಲ್ಲಿ ತೆರೆಕಾಣಲಿದೆ.

ಶಿವರಾಜ್ ಕುಮಾರ್, ಸುದೀಪ್ ಮತ್ತು ಉಪೇಂದ್ರ ಜೊತೆಯಾಗಿ ಒಂದೇ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅದ್ಧೂರಿ ತಾರಾಗಣ, ಮೇಕಿಂಗ್, ಭಾರೀ ಬಜೆಟ್ ಮತ್ತು ಹೊಸ ಬಗೆಯ ಕಥೆಯು ಈ ಸಿನಿಮಾದಲ್ಲಿದೆ. ಈಗಾಗಲೇ ಮೂವರು ನಟರ ಅಭಿಮಾನಿಗಳು ಮುಗಿಬಿದ್ದು ಟಿಕೆಟ್ ಖರೀದಿಸಿತ್ತು.

ಸುದೀಪ್ (Sudeep) ಮತ್ತು ಉಪೇಂದ್ರ (Upendra), ಶಿವಣ್ಣ (ShivaRajkumar) ನಟಿಸಿರುವ ‘ಕಬ್ಜ’ ಸಿನಿಮಾ ಈಗಾಗಲೇ ಚಿತ್ರದ ಟೀಸರ್, ಪೋಸ್ಟರ್‌ನಿಂದ ನಿರೀಕ್ಷೆ ಹುಟ್ಟುಹಾಕಿದೆ. ಇತ್ತೀಚಿಗಷ್ಟೇ `ಚುಮು ಚುಮು ಚಳಿ ಚಳಿ’ ಎನ್ನುವ ಸ್ಪೆಷಲ್ ಸಾಂಗ್‌ನಲ್ಲಿ ಉಪ್ಪಿ ಜೊತೆ ತಾನ್ಯ ಹೋಪ್ ಹೆಜ್ಜೆ ಹಾಕಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!