ಪಂಜಾಬಿ ನಟ ಅಮನ್​ ಧಾಲಿವಾಲ್ ಮೇಲೆ ಮಾರಣಾಂತಿಕ ಹಲ್ಲೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಪಂಜಾಬಿ ಮತ್ತು ಹಿಂದಿ ನಟ ಅಮನ್​ ಧಾಲಿವಾಲ್ (Aman Dhaliwal)​ಮೇಲೆ ಮಾರಣಾಂತಿಕವಾಗಿ ಹಲ್ಲೆ (Assaut) ಮಾಡಲಾಗಿದೆ.

ಅಮನ್​ ಧಾಲಿವಾಲ್​ ಅವರು ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾನೆ.

ಈ ಶಾಕಿಂಗ್​ ಘಟನೆಯ ವಿಡಿಯೋ (Aman Dhaliwal Viral Video) ವೈರಲ್​ ಆಗಿದೆ. ಗಂಭೀರವಾಗಿ ಗಾಯಗೊಂಡಿರುವ ಅಮನ್​ ಧಾಲಿವಾಲ್​ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಅಮನ್​ ಧಾಲಿವಾಲ್​ ಅವರು ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗ ಕಿಡಿಗೇಡಿಯೊಬ್ಬ ಒಳಗೆ ಪ್ರವೇಶಿಸಿದ್ದಾನೆ. ಕೈಯಲ್ಲಿ ಮಾರಕಾಸ್ತ್ರ ಹಿಡಿದು ಎಲ್ಲರನ್ನೂ ಬೆದರಿಸಿದ್ದಾನೆ. ನೀರು ಕೊಡುವಂತೆ ದಬಾಯಿಸಿದ್ದಾನೆ. ಅಮನ್​ ಧಾಲಿವಾಲ್​ ಕಡೆಗೆ ಮಚ್ಚು ತೋರಿಸಿ ಹೆದರಿಸಿದ್ದಾನೆ. ಈ ವೇಳೆ ಆತನನ್ನು ಮಣಿಸಲು ಅಮನ್​ ಪ್ರಯತ್ನಿಸಿದ್ದಾರೆ. ಆಗ ಅವರಿಗೆ ಗಂಭೀರ ಗಾಯಗಳು ಆಗಿವೆ.

ಬಾಲಿವುಡ್​ ಸಿನಿಮಾಗಳು ಹಾಗೂ ಪಂಜಾಬಿ ಸಿನಿಮಾಗಳಲ್ಲಿ ಅಮನ್​ ಧಾಲಿವಾಲ್ ಅವರು ನಟಿಸಿದ್ದಾರೆ. ‘ಜೋದಾ ಅಖ್ಬರ್​’ ಚಿತ್ರದಲ್ಲಿ ಅವರು ಹೃತಿಕ್​ ರೋಷನ್​ ಮತ್ತು ಐಶ್ವರ್ಯಾ ರೈ ಜೊತೆ ಕೆಲಸ ಮಾಡಿದ್ದಾರೆ. ಈಗ ಅವರು ಅಮೆರಿಕದಲ್ಲಿ ಸೆಟ್ಲ್​ ಆಗಿದ್ದಾರೆ. ‘ಬಿಗ್​ ಬ್ರದರ್​’, ‘ಇಕ್​ ಕುಡಿ ಪಂಜಾಬ್​ ದಿ’, ‘ಅಜ್​ ದೇ ರಾಂಜಾ’ ಮುಂತಾದ ಸಿನಮಾದಲ್ಲಿ ಅವರು ನಟಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!