ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಹೊರವಲಯದ ಸುಳ್ಳ್ಯದ ಪೆರಾಜೆಯ ಬಳಿ ಕಾಡಾನೆಯೊಂದು ಹಲವು ಕಡೆ ಸುತ್ತಾಡಿ ಬಳಿಕ ಪಯಸ್ವಿನಿ ನದಿ ಮತ್ತು ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಪೂಮಲೆ ಕಾಡಿನ ಕಡೆ ತೆರಳುವ ಸಂದರ್ಭದಲ್ಲಿ ಬಿಳಿಯಾರು ಎಂಬಲ್ಲಿ ರಸ್ತೆ ಬದಿ ನಿಂತಿದ್ದ ಓಮಿನಿ ಕಾರಿಗೆ ಹಾನಿ ಮಾಡಿ ತೆರಳಿರುವ ಘಟನೆ ನಡೆದಿದೆ.
ಪೆರಾಜೆಯ ಉದ್ಯಮಿ ಉನೈಸ್ ಪೆರಾಜೆ ಎಂಬವರಿಗೆ ಸೇರಿದ ಓಮ್ನಿಯಲ್ಲಿ ಸೋಮವಾರ ಬೆಳಿಗ್ಗೆ ಶಾಲಾ ಮಕ್ಕಳನ್ನು ಕರೆದೊಯ್ಯಲು ಕಾರಿನ ಚಾಲಕ ಗೂನಡ್ಕದ ಅವಿನಾಶ್ ಅವರು ಕಾರನ್ನು ಬಿಳಿಯಾರಿನಲ್ಲಿ ನಿಲ್ಲಿಸಿದ್ದರು. ಈ ವೇಳೆ ರಸ್ತೆಯಲ್ಲಿ ಕಾಣಿಸಿಕೊಂಡ ಕಾಡಾನೆ ಕಾರಿನ ಮೇಲೆ ದಾಳಿ ನಡೆಸಿ ಮುಂಭಾಗದ ಗಾಜನ್ನು ಪುಡಿ ಮಾಡಿ ಪಲಾಯನಗೊಂಡಿದೆ.
ಆನೆ ದಾಳಿ ಮಾಡಿದ ವೇಳೆ ಚಾಲಕ ಅವಿನಾಶ್ ಕಾರಿನ ಮುಂಭಾಗದ ಸೀಟಿನಲ್ಲಿ ಕುಳಿತ್ತಿದ್ದರೆನ್ನಲಾಗಿದ್ದು, ಅವರ ಕೈಗೆ ಅಲ್ವಸ್ವಲ್ಪ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.