Friday, June 2, 2023

Latest Posts

ಕೈ ಪಕ್ಷದವರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು: ಕೇಂದ್ರ ಸಚಿವೆ ಸೀತಾರಾಮನ್

ಹೊಸದಿಗಂತ ವರದಿ, ಕಲಬುರಗಿ:

ಕಾಂಗ್ರೇಸ ಪಕ್ಷ ನೀಡುತ್ತಿರುವ ಗ್ಯಾರಂಟಿ ಕಾರ್ಡನ ಆಶ್ವಾಸನೆಯೂ ಸುಳ್ಳಿನಿಂದ ಕೂಡಿದ್ದು,ಹೀಗಾಗಿ ಅವುಗಳನ್ನು ನಂಬಬೇಡಿ. ಯಾಕಂದರೆ ಕಾಂಗ್ರೆಸ್ ಪಕ್ಷ ಸುಳ್ಳು ಹೇಳಿ ದಾರಿ ತಪ್ಪಿಸುವಲ್ಲಿ ನಿಸ್ಸಿಮರಾಗಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಬುಧವಾರ ಪಟ್ಟಣದ ಎ.ವ್ಹಿ.ಪಾಟೀಲ್ ಕಲ್ಯಾಣ ಮಂಟದಲ್ಲಿ ಬೃಹತ್ ಮಹಿಳಾ ಸಮಾವೇಶವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ರಾಜಸ್ತಾನ, ಮಧ್ಯಪ್ರದೇಶ, ಛತ್ತಿಸಗಡ ಈ ರಾಜ್ಯಗಳಲ್ಲಿ ಕೂಡಾ ೨೦೦ ಯೂನಿಟ್ ವಿದ್ಯುತ್ ಪ್ರೀ, ಮನೆ ಒಡತಿಗೆ ೨ ಸಾವಿರ ರೂ. ಯುವಕರಿಗೆ ೩ ಸಾವಿರ ರೂ. ಅಲ್ಲಿ ಸಹ ಇದೇ ರೀತಿ ಹೇಳಿದರು. ಎಲ್ಲಿಯೂ ಕೂಡಾ ಇವರು ಆಶ್ವಾಸನೆ ಈಡೆರೀಸಿಲ್ಲ ಎಂದ ಅವರು, ಸುಭಾಷ ಗುತ್ತೇದಾರ ೦೪ ಭಾರೀ ಗೆದ್ದಿದ್ದಾರೆ. ಜನರಿಂದ ಒಳ್ಳೆಯ ಅಭಿಪ್ರಾಯವಿದೆ. ಮೇ ೧೦ ರಂದು ನಡೆಯುವ ಚುನಾವಣೆಯಲ್ಲಿ ೦೫ ನಂಬರ ಕಮಲ ಬಟನ ಒತ್ತುವ ಮೂಲಕ ೦೫ ಭಾರೀ ಆರಿಸಿ ತನ್ನಿ ಎಂದು ಮತಯಾಚಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರ ಮಹಿಳೆಯರಿಗೆ ಸ್ವಾವಲಂಬನೆ ಜೀವನ ಸಾಗಿಸಲು ಪಿಎಂ ಮುದ್ರಾ ಯೋಜನೆ ಅಡಿಯಲ್ಲಿ ೧೦೦ ರಲ್ಲಿ ೭೦ ಜನ ಮಹಿಳೆಯರು ಸಾಲ ತೆಗೆದುಕೊಳ್ಳುತ್ತಿದ್ದಾರೆ ಮತ್ತು ಕೋವಿಡ ಸಮಯದಲ್ಲಿ ಮನೆಯ ಮಹಿಳೆಯರಿಗಾಗಿ ೩ ಭಾರೀ ೫೦೦ ರೂ. ಪ್ರತಿ ಒಬ್ಬರು ಹಾಕಿದ್ದಾರೆ. ಅಲ್ಲದೇ ನರೇಂದ್ರ ಮೋದಿ ಕ್ಯಾಬಿನೆಟ ನಲ್ಲಿ ಮಹಿಳೆಯಾದ ನನಗೆ ಹಣಕಾಸು ಖಾತೆ ನೀಡಿರುವುದು ಅವರಿಗೆ ಮಹಿಳೆಯವರ ಮೇಲೆ ಇರುವ ವಿಶೇಷ ಗೌರವಯಿದೆ. ಈ ರಾಜ್ಯದಲ್ಲಿ ನಮ್ಮದೇ ಸರಕಾರ ಅಧಿಕಾರಿ ಬರಲಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!