ನೀನೇ ನನ್ನ ಜಗತ್ತು; ಇನ್ಸ್ಟಾದಲ್ಲಿ ಮುದ್ದಾದ ಮಗುವಿನ ಚಿತ್ರ ಹಂಚಿಕೊಂಡ ಕಾಜಲ್‌ ಅಗರ್ವಾಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪ್ರಖ್ಯಾತ ನಟಿ ಕಾಜಲ್ ಅಗರ್ವಾಲ್ ಮೊದಲಬಾರಿಗೆ ತಮ್ಮ ಮುದ್ದಾದ ಮಗುವಿನ ಫೋಟೋ ಹಂಚಿಕೊಂಡಿದ್ದಾರೆ.
ವರ್ಷದ ಹಿಂದೆ ಉದ್ಯಮಿ ಗೌತಮ್ ಕಿಚ್ಲು ಅವರನ್ನು ವಿವಾಹವಾಗಿರುವ ಕಾಜಲ್‌ ಅಗರ್ವಾಲ್‌ ಏಪ್ರಿಲ್ 19 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಇನ್ಸ್ಟಾಗ್ರಾಮ್‌ ನಲ್ಲಿ ಫೋಟೋ ಹಂಚಿಕೊಳ್ಳುವುದರ ಜೊತೆ ಭಾವನಾತ್ಮಕ ಪತ್ರವನ್ನು ಬರೆದಿದ್ದಾರೆ. ನೀನು ಯಾವಾಗಲೂ ನನ್ನ ಜೊತೆಯೇ ಇರಬೇಕೆಂದು ನಾನು ಬಯಸುತ್ತೇನೆ. ನಿನ್ನನ್ನು ನನ್ನ ತೋಳುಗಳಲ್ಲಿ ಹಿಡಿದಿಟ್ಟುಕೊಂಡ ಕ್ಷಣ, ನಿನ್ನ ಪುಟ್ಟ ಕೈಯನ್ನು ನನ್ನ ಕೈಯಲ್ಲಿ ಹಿಡಿದು, ನಿನ್ನ ಬೆಚ್ಚಗಿನ ಉಸಿರನ್ನು ಅನುಭವಿಸಿದ, ಆ ನಿನ್ನ ಸುಂದರ ಕಣ್ಣುಗಳನ್ನು ನೋಡಿದ ಕ್ಷಣಗಳನ್ನು ಮರೆಯಲಾರೆ. ತಾಯ್ತನದ ಖುಷಿಯನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ, ನೀನೇ ನನಗೆ ಎಲ್ಲಾ ಎಂದು ಬರೆದುಕೊಂಡಿದ್ದಾರೆ.

ಕಳೆದ ಕೆಲದಿನಗಳಿಂದ ಚಿತ್ರರಂಗದಿಂದ ವಿರಾಮ ಪಡೆದಿದ್ದ ಕಾಜಲ್‌ ತಮಿಳು ನಿರ್ದೇಶಕ ಎಸ್‌ ಶಂಕರ್‌ ನಿರ್ದೇಶನದ ಇಂಡಿಯನ್‌ 2 ಚಿತ್ರದಲ್ಲಿ ಕಮಲ್‌ ಹಸನ್‌ ಗೆ ನಾಯಕಿಯಾಗಿ ಚಿತ್ರರಂಗಕ್ಕೆ ಕಂಬ್ಯಾಕ್‌ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!