ಗರ್ಭಿಣಿಯರ ದೇಹದ ಬಗ್ಗೆ ಮಾತಾಡೋರಿಗೆ ಖಡಕ್ ಉತ್ತರ ಕೊಟ್ಟ ಕಾಜಲ್ ಅಗರ್‌ವಾಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಕಾಜಲ್ ಅಗರ್‌ವಾಲ್ ತಮ್ಮ ಪ್ರೆಗ್ನೆನ್ಸಿ ಬ್ರೇಕ್‌ನ್ನು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ.
ಸದ್ಯ ದುಬೈನಲ್ಲಿರೋ ಕಾಜಲ್ ಆಗಾಗ ಫೋಟೊಶೂಟ್ ಮಾಡಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡ್ತಾ ಇದ್ದಾರೆ. ಫ್ಯಾನ್ಸ್ ಕೂಡ ಈ ಫೋಟೊಸ್ ನೋಡಿ ಖುಷಿಪಟ್ಟಿದ್ದಾರೆ.
ಆದರೆ ಕೆಲವರು ಮಾತ್ರ ಪ್ರೆಗ್ನೆನ್ಸಿ ಸಮಯದಲ್ಲಿ ಫೋಟೊಶೂಟ್ ಯಾಕೆ ಮಾಡಿಸ್ಬೇಕು ಅನ್ನೋ ರೀತಿ ಮಾತನಾಡಿದ್ದು, ಕಾಜಲ್ ಅವರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ.

”ಇದೀಗ ನನ್ನ ಜೀವನದ ಅಮೇಝಿಂಗ್ ಫೇಸ್ ಆರಂಭ ಆಗಿದೆ. ನನ್ನ ದೇಹದಲ್ಲಿ, ಜೀವನದಲ್ಲಿ, ಮನೆಯಲ್ಲಿ, ಫೀಲ್ಡ್‌ನಲ್ಲಿ ಹೊಸ ಬದಲಾವಣೆ ಕಾಣ್ತಾ ಇದ್ದೇನೆ. ಈ ಸಂದರ್ಭದಲ್ಲಿ ಬಾಡಿ ಶೇಮಿಂಗ್ ಮಾಡೋದು, ದಪ್ಪ ಆಗಿದ್ದೀರಾ ಎನ್ನೋದು, ಮೀಮ್ಸ್,ಟ್ರೋಲ್ಸ್ ಮಾಡೋದು ಸರಿಯಲ್ಲ. ಇದರಿಂದ ನನಗೇನು ಸಹಾಯ ಆಗೋದಿಲ್ಲ. ನೀವು ಹಾಯಾಗಿ ಬದುಕಿ, ನಮ್ಮನ್ನು ಹಾಯಾಗಿ ಬದುಕೋಕೆ ಬಿಡೋದು ಅಷ್ಟೊಂದು ಕಷ್ಟದ ಕೆಲಸ ಅಲ್ಲ ಅನಿಸುತ್ತದೆ. ಮಗು ಹುಟ್ಟಿದ ನಂತರ ಮತ್ತೆ ಮೊದಲಿನಂತೆ ಆಗೋದಕ್ಕೆ ಸ್ವಲ್ಪ ಸಮಯ ಬೇಕು. ಅಥವಾ ಮುಂಚಿನಂತೆ ಆಗೋದಕ್ಕೆ ಆಗದೇ ಇರಬಹುದು, ಆದರೆ ಇಟ್ಸ್ ಒಕೆ” ಎಂದು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!