Wednesday, August 10, 2022

Latest Posts

ಇವರು ಬ್ಯಾಟ್ ಬೀಸಿದ್ರೆ ಬರೀ ಸಿಕ್ಸ್, ಫೋರ್: 57 ಎಸೆತಗಳಲ್ಲಿ 116 ಗಳಿಸಿದ ಬ್ಯಾಟರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಗ್ಲೆಂಡ್ ಆಟಗಾರ ಜೇಸನ್ ರಾಯ್ ಪಾಕಿಸ್ತಾನ್ ಸೂಪರ್ ಲೀಗ್ ನಲ್ಲಿ ಸ್ಫೋಟಕ ಶತಕ ಸಿಡಿಸುವ ಮೂಲಕ ಸುದ್ದಿಯಲ್ಲಿದ್ದಾರೆ.
ಈಗಾಗಲೇ ಐಪಿಎಲ್ ಗಾಗಿ ಫ್ರಾಂಚೈಸಿಗಳು ತಂಡದ ಆಟಗಾರರನ್ನು ಆಯ್ಕೆ ಮಾಡುತ್ತಿರುವ ಹೊತ್ತಿನಲ್ಲಿ ಜೇಸನ್ ರಾಯ್ ಈಗ ಎಲ್ಲರ ಗಮನ ಸೆಳೆದಿದ್ದಾರೆ.
ಕ್ವೆಟ್ಟಾ ಗ್ಲಾಡಿಯೇಟರ್ಸ್ ಹಾಗೂ ಲಾಹೋರ್ ಖಲಂದರ್ಸ್ ನಡುವಿನ ಪಂದ್ಯದಲ್ಲಿ ಖಲಂದರ್ಸ್ 5 ವಿಕೆಟ್ ನಷ್ಟಕ್ಕೆ 204 ರನ್ ಗಳಿಸಿತು. ಈ ಗುರಿಯನ್ನು ಬೆನ್ನತ್ತಿದ ಜೇಸನ್ ರಾತ್ ತಮ್ಮ ಭರ್ಜರಿ ಬ್ಯಾಟಿಂಗ್ ಮೂಲಕ ಉತ್ತಮ ಪ್ರದರ್ಶನ ನೀಡಿದ್ದಾರೆ.
ಕೇವಲ 20 ಬಾಲ್ ಗಳಲ್ಲಿ ಅರ್ಧಶತಕ ಬಾರಿಸಿದ ರಾತ್. 49 ಎಸೆತಗಳಲ್ಲಿ 8 ಬೌಂಡರಿ, 8 ಸಿಕ್ಸ್ ಗಳಿಸುವ ಮೂಲಕ ಶತಕ ರನ್ ಗಳಿಸಿದ್ದಾರೆ. ಕೊನೆಯಲ್ಲಿ ಒಟ್ಟು 57 ಎಸೆತಗಳಲ್ಲಿ 11 ಫೋರ್, 8 ಸಿಕ್ಸ್ ನೊಂದಿಗೆ 116 ರನ್ ಗಳಿಸಿ ಔಟಾದರು.
ಈ ಮೂಲಕ ಗ್ಲಾಡಿಯೇಟರ್ಸ್ 7 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss