Monday, December 4, 2023

Latest Posts

CINE| ವೇದಿಕೆ ಮೇಲೆಯೇ ಬತುಕಮ್ಮ ಹಬ್ಬ ಆಚರಿಸಿದ ನಟಿ ಶ್ರೀಲೀಲಾ, ಕಾಜಲ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತೆಲಂಗಾಣದಲ್ಲಿ ‘ಬತುಕಮ್ಮ’ ಹಬ್ಬ ಇದೇ ತಿಂಗಳ 15ರಂದು (ಮಹಾಲಯ ಅಮವಾಸ್ಯೆ) ಆರಂಭವಾಗಲಿದೆ. ಬತುಕಮ್ಮ, ಎಲ್ಲಾ ಮಹಿಳೆಯರು ಒಟ್ಟಿಗೆ ಸೇರಿ ಆಚರಿಸುವ ಹೂವಿನ ಹಬ್ಬ. ಅಮವಾಸ್ಯೆಯಿಂದ ದುರ್ಗಾಷ್ಟಮಿಯವರೆಗೆ ಒಂಬತ್ತು ದಿನಗಳವರೆಗೆ ಮುಂದುವರಿಯುತ್ತದೆ. ಈಗಾಗಲೇ ತೆಲಂಗಾಣದಲ್ಲಿ ಬತುಕಮ್ಮ ಕಳೆ ಶುರುವಾಗಿದ್ದು, ಭಾನುವಾರ ಹನುಮಕೊಂಡದಲ್ಲಿ ನಾಯಕಿಯರಾದ ಕಾಜಲ್ ಅಗರ್ವಾಲ್ ಮತ್ತು ಶ್ರೀಲೀಲಾ ಬತುಕಮ್ಮ ಹಬ್ಬವನ್ನಾಚರಿಸಿದರು. ಭಗವಂತ ಕೇಸರಿ ಟ್ರೈಲರ್ ಬಿಡುಗಡೆ ಕಾರ್ಯಕ್ರಮದ ಅಂಗವಾಗಿ ಇವರಿಬ್ಬರು ಬತುಕಮ್ಮ ನೃತ್ಯಕ್ಕೆ ಹೆಜ್ಜೆ ಹಾಕಿದರು.

ನಂದಮೂರಿ ಬಾಲಕೃಷ್ಣ ಮತ್ತು ಕಾಜಲ್ ಅಗರ್ವಾಲ್ ಅಭಿನಯದ ‘ಭಗವಂತ್ ಕೇಸರಿ’ ಚಿತ್ರವನ್ನು ಅನಿಲ್ ರಾವಿಪುಡಿ ನಿರ್ದೇಶಿಸಿದ್ದಾರೆ. ಯುವ ನಾಯಕಿ ಶ್ರೀಲೀಲಾ ಮುಖ್ಯಭೂಮಿಕೆಯಲ್ಲಿ, ಬಾಲಿವುಡ್ ನಟ ಅರ್ಜುನ್ ರಾಂಪಾಲ್ ವಿಲನ್‌ ಆಗಿ ನಟಿಸಿದ್ದಾರೆ. ಈ ಚಿತ್ರ ಅಕ್ಟೋಬರ್ 19 ರಂದು ತೆರೆಗೆ ಬರಲಿದೆ. ಈ ಸಂದರ್ಭದಲ್ಲಿ ನಿನ್ನೆ ರಾತ್ರಿ ಹನುಮಕೊಂಡದಲ್ಲಿ ಭಗವಂತ ಕೇಸರಿ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಭಗವಂತ್ ಕೇಸರಿ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ನಾಯಕಿಯರಾದ ಕಾಜಲ್ ಅಗರ್ವಾಲ್ ಮತ್ತು ಶ್ರೀಲೀಲಾ ವಿಶೇಷ ಆಕರ್ಷಣೆಯಾದರು. ಇಬ್ಬರೂ ತೆಲುಗು ಹುಡುಗಿಯರಂತೆ ಮಿಂಚಿ ವೇದಿಕೆ ಮೇಲೆ ಸಾಂಪ್ರದಾಯಿಕ ಬತುಕಮ್ಮ ಹಾಡಿಗೆ ಹೆಜ್ಜೆ ಹಾಕಿದರು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೀವೂ ನೋಡಿ..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!