Friday, March 24, 2023

Latest Posts

ಯುಗಾದಿ ಉಡುಗೊರೆಯಾಗಿ ಕಾಜಲ್ ಹೊಸ ಸಿನಿಮಾ: ಪ್ರೇಕ್ಷಕರನ್ನು ಭಯಪಡಿಸುತ್ತಾರಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟಾಲಿವುಡ್ ಚಂದಮಾಮ ಕಾಜಲ್ ಅಗರ್‌ವಾಲ್ ಮದುವೆಯ ನಂತರ ಕೆಲವೇ ಚಿತ್ರಗಳಲ್ಲಿ ನಟಿಸಿದ್ದಾರೆ. ಒಂದು ಮಗುವಿನ ತಾಯಿಯಾದ ಆಗಿರುವ ಕಾಜಲ್ ಈಗ ಮತ್ತೆ ತಮ್ಮ ವೇಗ ಹೆಚ್ಚಿಸಿಕೊಂಡಿದ್ದಾರೆ. ಹಾರರ್ ಕಾಮಿಡಿ ಸಿನಿಮಾ ‘ಘೋಸ್ಟಿ’ ಮೂಲಕ ಪ್ರೇಕ್ಷಕರನ್ನು ಹೆದರಿಸಲು ಬರುತ್ತಿದ್ದಾರೆ. ಈಗಾಗಲೇ ಎಲ್ಲಾ ಕೆಲಸಗಳನ್ನು ಮುಗಿಸಿರುವ ಈ ಚಿತ್ರವನ್ನು ಯುಗಾದಿ ಹಬ್ಬದಂದು ಚಿತ್ರತಂಡ ಬಿಡುಗಡೆ ಮಾಡುತ್ತಿದೆ.

ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಪ್ರಕಟಿಸಿದೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಟ್ರೇಲರ್ ಪೂರ್ತಿ ಮನರಂಜನೆ ನೀಡುತ್ತಿರುವುದರಿಂದ ಪ್ರೇಕ್ಷಕರು ಈ ಚಿತ್ರದ ಬಗ್ಗೆ ಉತ್ತಮ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ಕಾಜಲ್ ಎರಡು ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಒಂದು ಪೊಲೀಸ್ ಪಾತ್ರವಾದರೆ ಇನ್ನೊಂದು ಸಿನಿಮಾ ನಾಯಕಿ. ಏತನ್ಮಧ್ಯೆ ಈ ಸಿನಿಮಾದಲ್ಲಿ ದೆವ್ವ ಹಿಡಿದ ಕಾಜಲ್ ಎಂತಹ ಸಮಸ್ಯೆಗಳನ್ನು ಎದುರಿಸಿದಳು ಎಂಬುದನ್ನು ತಮಾಷೆಯಾಗಿ ತೋರಿಸಲು ಹೊರಟಿದ್ದಾರೆ.

ಯೋಗಿ ಬಾಬು ಅಂಡ್ ಗ್ಯಾಂಗ್ ನ ಕಾಮಿಡಿ ಪ್ರೇಕ್ಷಕರನ್ನು ನಗಿಸುವುದು ಖಚಿತ ಎನ್ನುತ್ತಾರೆ ಚಿತ್ರತಂಡ. ಈ ಸಿನಿಮಾದಲ್ಲಿ ಕೆ ಎಸ್ ರವಿಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಲ್ಯಾಣ್ ನಿರ್ದೇಶನದ ಈ ಚಿತ್ರಕ್ಕೆ ಸ್ಯಾಮ್ ಸಿಎಸ್ ಸಂಗೀತ ನೀಡಿದ್ದಾರೆ. ಮಾರ್ಚ್ 17 ರಂದು ಬಿಡುಗಡೆಯಾಗುತ್ತಿರುವ ಘೋಸ್ಟಿ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸನ್ನು ಪಡೆಯುತ್ತದೆಯೇ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!