Sunday, March 26, 2023

Latest Posts

ಭಾರತದಲ್ಲಿ ಉದ್ಯೋಗ ಕಡಿತ ಪರ್ವ: ಐದರಲ್ಲಿ ನಾಲ್ಕು ಬೆಂಗಳೂರಲ್ಲೇ ನಡೆದಿವೆ ಎನ್ನುತ್ತಿವೆ ಅಂಕಿ ಅಂಶಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೋವಿಡ್‌ ನಂತರದ ಕಾಲಘಟಟ್ಟದಲ್ಲಿ ತಲೆದೂರಿರುವ ಆರ್ಥಿಕ ಅನಿಶ್ಚಿತತೆಗಳಿಂದ ಜಾಗತಿಕವಾಗಿ ಉದ್ಯೋಗ ಕಡಿತದ ಪರ್ವ ಕಳೆದ ವರ್ಷದಲ್ಲಿಯೇ ಆರಂಭವಾಗಿದ್ದು ಈ ವರ್ಷವೂ ಮುಂದುವರೆದಿದೆ. ಜಾಗತಿಕವಾಗಿ ಲಕ್ಷಾಂತರ ಮಂದಿ ಉದ್ಯೋಗಕಳೆದುಕೊಂಡಿದ್ದಾರೆ. ಭಾರತದಲ್ಲಿ ಈ ವರ್ಷದಲ್ಲಿಯೇ ಸಾವಿರಾರು ಜನರು ಉದ್ಯೋಗ ಕಳೆದುಕೊಂಡಿದ್ದಾರೆ.

ಭಾರತೀಯ ಸ್ಟಾರ್ಟಪ್‌ ಗಳು 2023ರಲ್ಲಿ 5,057 ಮಂದಿಯನ್ನು ತೆಗೆದುಹಾಕಿದ್ದು ಎಡ್‌ಟೆಕ್‌, ಆಹಾರ ಮತ್ತು ಆರೋಗ್ಯ ಸೇವೆಗಳು, ಟೆಕ್‌ ವಲಯ ಸೇರಿದಂತೆ ಹಲವಾರು ವಲಯಗಳಲ್ಲಿ ಈ ಉದ್ಯೋಗ ಕಡಿತಗಳು ನಡೆದಿವೆ. ಒಟ್ಟಾರೆ ಉದ್ಯೋಗ ಕಡಿತಗಳಲ್ಲಿ 4,087ರಷ್ಟು ಕಡಿತಗಳು ಕೇವಲ ಬೆಂಗಳೂರಿನಲ್ಲಿಯೇ ನಡೆದಿದೆ ಎಂದು ಸಮೀಕ್ಷೆಯೊಂದು ಬಹಿರಂಗ ಪಡಿಸಿದೆ. ಒಟ್ಟಾರೆಯಾಗಿ ನಡೆದ ಐದು ಉದ್ಯೋಗ ಕಡಿತಗಳಲ್ಲಿ ನಾಲ್ಕು ಕಡಿತಗಳು ಬೆಂಗಳೂರಿನಲ್ಲಿಯೇ ನಡೆದಿದೆ ಎನ್ನಲಾಗಿದೆ.

ನಂತರದ ಸ್ಥಾನಗಳಲ್ಲಿ ಮುಂಬೈ ಹಾಗು ಗುರುಗ್ರಾಮ್‌ ನಗರಗಳಿದ್ದು ಕ್ರಮವಾಗಿ 390 ಮತ್ತು 325 ಕಡಿತಗಳು ಸಂಭವಿಸಿದೆ. ಉಳಿದಂತೆ ಉದ್ದಿಮೆ ನಗರಗಳಾದ ದೆಹಲಿ, ಪುಣೆ ಇಂದೋರ್‌ ಗಳಲ್ಲಿ ಅತ್ಯಂತ ಕಡಿಮೆ ಉದ್ಯೋಗ ಕಡಿತಗಳು ನಡೆದಿವೆ.

ಉದ್ಯೋಗಕಡಿತಗಳಿಗೆ ಬೈಜೂಸ್‌ ಹಾಗು ಶೇರ್‌ ಚಾಟ್‌ ಹೆಚ್ಚಿನ ಕೊಡುಗೆ ನೀಡಿದ್ದು ಇವೆರಡು ಕಂಪನಿಗಳೇ 1,500 ಉದ್ಯೋಗ ಕಡಿತಕ್ಕೆ ಕಾರಣವಾಗಿವೆ. ಕೋವಿಡ್‌ ಬಂದಾಗಿನಿಂದ ಬರೋಬ್ಬರಿ 149 ಕಂಪನಿಗಳು ಭಾರತದಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿವೆ ಎಂದು ಅಂಕಿಅಂಶಗಳು ಬಹಿರಂಗ ಪಡಿಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!