BEAUTY TIPS| ಮಹಿಳೆಯರ ಸೌಂದರ್ಯ ಹೆಚ್ಚಿಸುವ ರಾಸಾಯನಿಕ ರಹಿತ ಕಾಡಿಗೆ ಹೀಗೆ ತಯಾರಿಸಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೆಲವು ಹೆಣ್ಮಕ್ಕಳು ಮೇಕಪ್‌ ಇಲ್ಲದೆಯೂ ಅಂದವಾಗಿ ಕಾಣುತ್ತಾರೆ. ಅವರ ಕಣ್ಣಗಳೇ ಅವರ ಸೌಂದರ್ಯದ ಪ್ರತಿಬಿಂಬವಾಗಿರುತ್ತವೆ. ಕಣ್ಣುಗಳನ್ನು ಮತ್ತಷ್ಟು ಸುಂದರವಾಗಿಸಲು ಕಾಡಿಗೆ ಹೆಚ್ಚು ಸಹಾಯ ಮಾಡುತ್ತದೆ. ಇದೀಗ ಮಾರುಕಟ್ಟೆಯಲ್ಲಿ ಸಿಗುವ ಅನೇಕ ಬ್ರಾಂಡ್‌ಗಳನ್ನು ಕಣ್ಣಿಗೆ ಹಚ್ಚುವುದು ರೂಢಿ. ಆದರೆ ಅವೆಲ್ಲವೂ ರಸಾಯನಿಕ ಯುಕ್ತ ಕಾಡಿಗೆಗಳಾಗಿರಬಹುದು. ಯಾವುದೇ ರಾಸಾಯನಿಕಗಳನ್ನು ಸೇರಿಸದೆ ಮನೆಯಲ್ಲಿಯೇ ಕಾಡಿಗೆ ತಯಾರಿಸಿ ಹಚ್ಚುವುದು ಮೇಲು.

ಮೂರು ಸಣ್ಣ ಕಲ್ಲುಗಳನ್ನು ತೆಗೆದುಕೊಂಡು ಅವುಗಳನ್ನು ಮಧ್ಯದಲ್ಲಿ ಒಂದು ದೀಪವನ್ನಿರಿಸಿ ಬೆಳಗಿಸಿ. ಕಲ್ಲುಗಳಿಗೆ ತಾಗುವಂತೆ ದೀಪದ ಮೇಲೆ ಒಂದು ಬಟ್ಟಲು ಅಥವಾ ತಟ್ಟೆಯನ್ನು ಬೋರಲು ಹಾಕಿ ಬಿಡಿ. ದೀಪ ಯಾವುದೇ ಕಾರಣಕ್ಕೂ ಆರಂದತೆ ನೋಡಿಕೊಳ್ಳುವುದು ಮುಖ್ಯ. ದೀಪ ಉರಿದಂತೆ ಅದರ ಕಪ್ಪು ಹೊಗೆ ಬಟ್ಟಲಿಗೆ ಅಂಟಿಕೊಂಡಿರುತ್ತದೆ. ಈಗ ಆ ಎಲ್ಲಾ ಪುಡಿಯನ್ನು ಮತ್ತೊಂದು ತಟೆಗೆ ಸುರಿದುಕೊಂಡು ಸ್ವಲ್ಪ ಅರಳೆ ಎಣ್ಣೆ ಹಾಕಿ ನೀರಾಗದಂತೆ ಗಟ್ಟಿಯಾದ ಉಂಡೆ ಮಾಡಿಕೊಳ್ಳಿ. ಈಗ ಆ ಪೇಸ್ಟ್ ಅನ್ನು ಗಾಜಿನ ಡಬ್ಬಿ ಅಥವಾ ಪ್ಲಾಸ್ಟಿಕ್‌ ಡಬ್ಬಿಗೆ ಸುರಿದು ಕಣ್ಣಿಗೆ ದಿನವೂ ಅನ್ವಯಿಸಿ.

ಈ ರೀತಿಯ ನೈಸರ್ಗಿಕ ಕಾಡಿಗೆ ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು, ಕಣ್ಣಿನ ಅಂದವನ್ನೂ ಹೆಚ್ಚಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!