Sunday, December 3, 2023

Latest Posts

ನವರಾತ್ರಿ ಹಿನ್ನೆಲೆ ಗರ್ಬಾ ನೃತ್ಯ ಆಚರಣೆ: 24 ಗಂಟೆಯಲ್ಲಿ ಹೃದಯಾಘಾತಕ್ಕೆ 10 ಮಂದಿ ಬಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶಾದ್ಯಂತ ನವರಾತ್ರಿ ಆಚರಣೆ ಸಂಭ್ರಮದಿಂದ ಜರುಗುತ್ತಿದೆ. ಗುಜರಾತ್‌ನಲ್ಲಿಅದ್ದೂರಿಯಾದ ಆಚರಣೆ ನಡೆಯುತ್ತಿದ್ದು, ಗರ್ಬಾ ಸಾಂಪ್ರದಾಯಿಕ ನೃತ್ಯದ ವೇಳೆ ಕಳೆದ 24 ಗಂಟೆಯಲ್ಲಿ ಹೃದಯಾಘಾತದಿಂದ 10 ಜನ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಗುಜರಾತ್‌ನ ಬರೋಡಾ ಸೇರಿ ಹಲವೆಡೆ ಗರ್ಬಾ ಹಾಡು, ನೃತ್ಯದ ವೇಳೆ ಜೋರಾದ ಸಂಗೀತದ ಶಬ್ದದಿಂದಾಗಿ ಹೆಚ್ಚಿನ ಜನರಿಗೆ ಹೃದಯಾಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಅದರಲ್ಲೂ, ಬಾಲಕರು, ಯುವಕರು ಹಾಗೂ ಮಧ್ಯವಯಸ್ಕರೇ ಮೃತಪಟ್ಟಿರುವುದು ಆತಂಕ ಮೂಡಿಸಿದೆ.

ಬರೋಡಾದ ದಭೋಯಿಯಲ್ಲಿ 13 ವರ್ಷದ ಬಾಲಕನು ಗರ್ಬಾ ನೃತ್ಯದ ವೇಳೆ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟೊತ್ತಿಗಾಗಲೇ ಬಾಲಕನು ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ. ಇನ್ನು ಅಹ್ಮದಾಬಾದ್‌ನಲ್ಲೂ ಗರ್ಬಾ ಆಚರಣೆ ವೇಳೆ 24 ವರ್ಷದ ಯುವಕ ಕುಸಿದು ಮೃತಪಟ್ಟಿದ್ದಾನೆ. ಕಪಾಡ್ವಂಜ್‌ನಲ್ಲೂ ಹೃದಯಾಘಾತಕ್ಕೆ 17 ವರ್ಷದ ಬಾಲಕ ಬಲಿಯಾಗಿದ್ದಾನೆ. ಹೀಗೆ ಕಳೆದ 24 ಗಂಟೆಯಲ್ಲಿ ಗರ್ಬಾ ನೃತ್ಯ ಆಚರಣೆ ವೇಳೆ ಹೃದಯಾಘಾತದಿಂದ 10 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ನವರಾತ್ರಿಯ ಮೊದಲ ಆರು ದಿನಗಳಲ್ಲಿ, 108 ತುರ್ತು ಆಂಬ್ಯುಲೆನ್ಸ್ ಸೇವೆಗಳಿಗೆ ಹೃದಯ ಸಂಬಂಧಿತ ಸಮಸ್ಯೆಗಳಿಗೆ 521 ಕರೆಗಳು ಮತ್ತು ಉಸಿರಾಟದ ತೊಂದರೆಗಾಗಿ ಹೆಚ್ಚುವರಿ 609 ಕರೆಗಳು ಬಂದಿವೆ. ಎಲ್ಲರೂ ಗರ್ಬಾ ನೃತ್ಯ ನಡೆಯುವ ವೇಳೆ ಅಂದರೆ ಸಂಜೆ 6 ಗಂಟೆಯಿಂದ ತಡರಾತ್ರಿ 2 ಗಂಟೆವರೆಗೆ ಕರೆ ಮಾಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಹಬ್ಬದ ಅಚರಣೆ ವೇಳೆ ಈ ರೀತಿಯ ಸಾವುಗಳು ನಿಜಕ್ಕೂ ಮೂಡಿಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!