ರೆಸ್ಟೋರೆಂಟ್‌ ಶೈಲಿಯ ಕಾಜು ಮಶ್ರೂಮ್‌ ಮಸಾಲಾ ಮನೆಯಲ್ಲೇ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಚಪಾತಿ, ರೋಟಿ, ಪೂರಿ ಎಲ್ಲದಕೂ ಸದಾ ಚಟ್ನಿ, ಪಲ್ಯ ತಿಂದು ಬೋರಾಗಿದ್ರೆ ಒಮ್ಮೆ ಮನೆಯಲ್ಲೇ ಕಾಜು ಮಶ್ರೂಮ್‌ ಮಸಾಲಾ ಮಾಡಿ. ಥೇಟ್‌ ರೆಸ್ಟೋರೆಂಟ್‌ ರೀತಿಯ ಟೇಸ್ಟ್‌ ಬಂದೇ ಬರುತ್ತೆ, ಆದರೆ ಪದಾರ್ಥಗಳ ಬಗ್ಗೆ ಗಮನವಿರಲಿ.

ಬೇಕಾಗುವ ಪದಾರ್ಥಗಳು: 

ಮೂರು ಟೊಮ್ಯಾಟೊ
ಒಂದಿಂಚು ಶುಂಠಿ
ಅರ್ಧ ಟೀ ಸ್ಪೂನ್‌ ಕರಿಮೆಣಸು
ಎರಡು ಏಲಕ್ಕಿ
ಮೂರು ಲವಂಗ
ಮೊಸರು
ಈರುಳ್ಳಿ, ಬೆಳ್ಳುಳ್ಳಿ
ಮೆಣಸಿನ ಪುಡಿ, ಉಪ್ಪು, ಧನಿಯಾ ಪುಡಿ
ಗರಂ ಮಸಾಲಾ, ಅರಿಶಿನ
ಗೋಡಂಬಿ
ಮಶ್ರೂಮ್‌
ಎಣ್ಣೆ

ಮಾಡುವ ವಿಧಾನ: 

ಮೊದಲಿಗೆ ಒಂದು ಮಿಕ್ಸಿ ಜಾರಿಗೆ ಟೊಮ್ಯಾಟೊ ಕತ್ತರಿಸಿ ಹಾಕಿ, ಅದಕ್ಕೆ ಏಲಕ್ಕಿ, ಶುಂಠಿ, ಬೆಳ್ಳುಳ್ಳಿ, ಲವಂಗ, ಕರಿಮೆಣಸು, ನೆನೆಸಿ ಅರ್ಧ ಕಪ್‌ ಗೋಡಂಬಿ, ಗಟ್ಟಿ ಮೊಸರು ಅರ್ಧ ಕಪ್‌ ನುಣ್ಣಗೆ ಪೇಸ್ಟ್‌ ಮಾಡಿಟ್ಟುಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಒಂದು ಕಪ್‌ನಷ್ಟು ಗೋಡಂಬಿ, ನೂರು/ನೂರಐತ್ತು ಗ್ರಾಂನಷ್ಟು ಮಶ್ರೂಮ್‌ ಹಾಕಿ ಕರಿದು ಸ್ವಲ್ಪ ಕಂದು ಬಣ್ಣಕ್ಕೆ ಬಂದ ಕೂಡಲೇ ತೆಗೆದಿಡಿ. ಅದೇ ಬಾಣಲೆಗೆ ಸ್ವಲ್ಪ ಎಣ್ಣೆ ಜಾಸ್ತಿ ಹಾಕಿ ಈರುಳ್ಳಿ, ಪುಲಾವ್‌ ಎಲೆ ಹಾಕಿ ಸ್ವಲ್ಪ ಬಾಡಿದ ಬಳಿಕ ಮೆಣಸಿನ ಪುಡಿ, ಜೀರಿಗೆ ಪುಡಿ, ಧನಿಯಾ ಪುಡಿ, ಗರಂ ಮಸಾಲಾ, ಅರಿಶಿನ ಸೇರಿಸಿ ಚೆನ್ನಾಗಿ ಹುರಿಯಿರಿ. ಬಳಿಕ ಮಿಕ್ಸಿ ಮಾಡಿ ಟೊಮ್ಯಾಟೊ ಮಿಶ್ರಣವನ್ನು ಹಾಕಿ ಎಣ್ಣೆ ಮೇಲೆ ತೇಲುವವರೆಗೆ ಕುದಿಸಿ. ಬಳಿಕ ಗೋಡಂಬಿ, ಮಶ್ರೂಮ್‌ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಐದು ನಿಮಿಷಗಳ ಕುದಿಸಿ. ಕೆಳಗಿಡುವ ಮುನ್ನ ಅರ್ಧ ನಿಂಬೆಹಣ್ಣಿನ ರಸ, ಕೊತ್ತಂಬರಿ ಸೊಪ್ಪು ಹಾಕಿ ಸರ್ವ್‌ ಮಾಡಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!