ಹರಿದುಬರುತ್ತಿದೆ ನೀರಿನ ‘ಪ್ರವಾಹ’: ಕೇರಳದಲ್ಲಿ ‘ರೆಡ್ ಅಲರ್ಟ್’ನತ್ತ ಮೂರು ಅಣೆಕಟ್ಟುಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದಲ್ಲಿ ಮಳೆ ಮತ್ತಷ್ಟು ಉಗ್ರ ರೂಪ ಪಡೆದುಕೊಂಡಿದೆ.
ವರ್ಷಧಾರೆಯ ಅಬ್ಬರಕ್ಕೆ ಅಣೆಕಟ್ಟುಗಳಲ್ಲಿ ಸಂಗ್ರಹ ಸಾಮರ್ಥ್ಯ ಮೀರುವ ಮಟ್ಟ ತಲುಪಿದ್ದು, ರೆಡ್ ಅಲರ್ಟ್ ಘೋಷಣೆಯತ್ತ ದಾಪುಗಾಲಿಟ್ಟಿವೆ. ಮುಲ್ಲಪೆರಿಯಾರ್, ಇಡುಕ್ಕಿ ಸಹಿತ ರಾಜ್ಯದ ಹಲವು ಅಣೆಕಟ್ಟುಗಳಲ್ಲಿ ನೀರಿನ ಮಟ್ಟವು ಅಪಾಯಕಾರಿ ಹಂತ ತಲುಪುತ್ತಿದ್ದು, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಂಕಿಅಂಶಗಳ ಅನ್ವಯ ಆರು ಅಣೆಕಟ್ಟುಗಳ ಪೈಕಿ ನಾಲ್ಕು ಅಣೆಕಟ್ಟುಗಳು ಇಡುಕ್ಕಿಯಲ್ಲೇ ಇದ್ದು, ಮೂರು ರೆಡ್ ಅಲರ್ಟ್ ಮಟ್ಟದಲ್ಲಿ, ಒಂದು ಆರೆಂಜ್ ಅಲರ್ಟ್ ಮಟ್ಟದಲ್ಲಿ ಇವೆ ಎಂದಿದೆ.
ರಾಜ್ಯದಲ್ಲಿ ಇನ್ನಷ್ಟು ಮಳೆಯಾಗುವ ಸೂಚನೆಯೂ ಇದೇ ಸಂದರ್ಭ ಹವಾಮಾನ ಇಆಲಖೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!