ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಎರಡೂವರೆ ವರ್ಷದ ಕಂದಮ್ಮನನ್ನು ಅರೆಸ್ಟ್ ಮಾಡಿದ್ದ ಪ್ರಕರಣ ಸುಖಾಂತ್ಯ ಕಂಡಿದೆ. ಪೊಲೀಸರು ಕಳ್ಳಿಯನ್ನು ಹಿಡಿದಿದ್ದು, ಮಗುವನ್ನು ತಾಯಿಗೆ ಒಪ್ಪಿಸಿದ್ದಾರೆ.
ಮನೆ ಹೊರಗೆ ಆಟವಾಡುತ್ತಿದ್ದ ಮಗುವನ್ನು ಕಳ್ಳಿಯೊಬ್ಬಳು ಅಪರಹರಿಸಿ ಎಸ್ಕೇಪ್ ಆಗಿದ್ದಳು. ಮಗುವಿನ ಮನೆಯಿರುವ ಪ್ರದೇಶದಲ್ಲೇ ಸುತ್ತಾಡಿ ಸಲೀಸಾಗಿ ಮಗುವನ್ನ ಕರೆದುಕೊಂಡು ಪರಾರಿಯಾಗಿದ್ದಳು. ಮಗಳಿಗಾಗಿ ಹೆತ್ತವರು ಬೆಳಗ್ಗೆಯಿಂದ ರಾತ್ರಿವರೆಗೂ ಬೆಂಗಳೂರಿನ ಬೀದಿ ಬೀದಿಯಲ್ಲಿ ಸುತ್ತಾಡಿದ್ದರು. ಆದರೆ ಕೊನೆಗೆ ಪೊಲೀಸರು ಮಗುವನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಿಳೆಯೊಬ್ಬರು ಮಗುವನ್ನು ಮೊದಲು ಮಾತನಾಡಿಸಿ ಬಳಿಕ ಯಾರಿಗೂ ಗೊತ್ತೇ ಆಗದಂತೆ ಮಗುವನ್ನು ಅಪಹರಣ ಮಾಡಿಕೊಂಡು ಕರೆದೊಯ್ಯುದಿದ್ದಾಳೆ. ಎರಡೂವರೆ ವರ್ಷದ ಮಗುವನ್ನು ಹಾಡಹಗಲೇ ಅಪಹರಣ ಮಾಡಿಕೊಂಡು ಮಹಿಳೆ ಎಸ್ಕೇಪ್ ಆಗಿದ್ದಳು. ಬೆಳಗ್ಗೆಯಿಂದ ರಾತ್ರಿವರೆಗೆ ಮಗುಗಾಗಿ ಹುಡುಕಾಡಿರುವ ಪೋಷಕರು ಬಳಿಕ ಮಗು ಸಿಕ್ಕರೇ ತಂದು ಕೊಡಿ ಅಂತ ಮನವಿ ಮಾಡಿದ್ದರು.
ಸದ್ಯ ಘಟನೆ ಸಂಬಂಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಹುಡುಕಾಟ ನಡೆಸಿದ್ದ ಪೊಲೀಸರು ಆರೋಪಿ ಸುಜಾತಳನ್ನ ಬಂಧಿಸಿದ್ದಾರೆ. ಸಿಸಿಟಿವಿ ಆಧರಿಸಿ ಮಹಿಳೆಯನ್ನು ಪೊಲೀಸರು ಟ್ರ್ಯಾಕ್ ಮಾಡಿದ್ದರು. ದೆವಯ್ಯ ಪಾರ್ಕ್ ಬಳಿ ಸುಜಾತ ಪತ್ತೆ ಆಗಿದ್ದು ಮಗು ಕೂಡ ಸಿಕ್ಕಿದೆ. ಸದ್ಯ ಮಗುವನ್ನ ರಕ್ಷಣೆ ಮಾಡಲಾಗಿದ್ದು ಸುಜಾತಳನ್ನ ವಿಚಾರಣೆ ಮಾಡಲಾಗುತ್ತಿದೆ. ಆದರೆ ಆಕೆ ಮಾನಸಿಕ ಅಸ್ವಸ್ಥೆ ಅನ್ನೋದು ವಿಚಾರಣೆಯಿಂದ ಗೊತ್ತಾಗಿದೆ.