ಹೊಸದಿಗಂತ ಡಿಜಿಟಲ್ ಡೆಸ್ಕ್:
ದರ್ಶನ್ ಅವರಿಗೆ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಬೆನ್ನು ಮತ್ತು ಕಾಲುಗಳಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ದರ್ಶನ್ ಶಸ್ತ್ರಚಿಕಿತ್ಸೆಯನ್ನು ಬೇಡ ಎನ್ನುತ್ತಿದ್ದಾರೆ ಎನ್ನಲಾಗಿದೆ, ಮುಂದಿನ 10 ದಿನಗಳಲ್ಲಿ ಕನ್ಸರ್ವೇಟಿವ್ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಹೇಳಲಾಗಿದೆ.
ನಟ ದರ್ಶನ್ ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, ಔಷಧಿ ಮತ್ತು ಮಾತ್ರೆಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೂ ಬೆನ್ನು ಮತ್ತು ಕಾಲು ನೋವು ಕಡಿಮೆಯಾಗಿಲ್ಲ. ಆದ್ದರಿಂದ, ಮುಂದಿನ 10 ದಿನಗಳವರೆಗೆ ಕನ್ಸರ್ವೇಟಿವ್ ಚಿಕಿತ್ಸೆ ಕೊಡಲು ವೈದ್ಯರು ಮುಂದಾಗಿದ್ದಾರೆ
ಕನ್ಸರ್ವೇಟಿವ್ ಚಿಕಿತ್ಸೆಯಲ್ಲಿ ಹುಷಾರಾಗದಿದ್ದರೆ, ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತೆ. ಶಸ್ತ್ರಚಿಕಿತ್ಸೆ ಸ್ವೀಕಾರಾರ್ಹವಲ್ಲದಿದ್ದರೆ, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗಳನ್ನು ಬದಲಾಯಿಸಲು ಅಥವಾ ಅರ್ಹ ವೈದ್ಯರಿಂದ ಚಿಕಿತ್ಸೆ ಪಡೆಯುವ ಆಯ್ಕೆ ಇದೆ.