Friday, July 1, 2022

Latest Posts

ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ; ಸಮ್ಮೇಳನಾಧ್ಯಕ್ಷರ ಅದ್ದೂರಿ ಮೆರವಣಿಗೆ

ಹೊಸದಿಗಂತ ವರದಿ, ಕಲಬುರಗಿ
ಜಿಲ್ಲೆಯ ಕಮಲಾಪುರಿನಲ್ಲಿ (ಕೆಂಬಾಳೆ ನಾಡು) ಕಲಬುರಗಿ ಜಿಲ್ಲಾ 18ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯರಾದ ಶ್ರೀ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರನ್ನು ತೆರೆದ ವಾಹನದಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಯಿತು.
ಕಮಲಾಪೂರ ಪಟ್ಟಣದ ಬಸವೇಶ್ವರ ವೃತ್ತದಿಂದ ಆರಂಭವಾದ ಮೆರವಣಿಗೆಗೆ ಕಮಲಾಪೂರ ತಹಸೀಲ್ದಾರ್ ಸುರೇಶ ವರ್ಮಾ ಅವರು ಚಾಲನೆ ನೀಡಿದರು.
ಡೊಳ್ಳು ಕುಣಿತ, ಹಲಿಗೆ ವಾದನ, ಗೊಂಬೆ ಕುಣಿತ, ಬಂಜಾರಾ ನೃತ್ಯ, ಮರವಂತಿಗೆ ಮೇಳ, ಶಹನಾಯಿ ಮೇಳ, ಹಗಲು ವೇಶ, ಹೆಜ್ಜೆ ಮೇಳ ಮೆರವಣಿಗೆಯುದ್ದಕ್ಕೂ ಗಮನ ಸೆಳೆಯಿತು.
ಮೆರವಣಿಗೆವೇಳೆ ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಹಾಗೂ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ರಾದ ಬಸವರಾಜ ಮತ್ತಿಮಡು ಅವರು ಡೊಳ್ಳುವಾದನಕ್ಕೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss