ಕಲಬುರಗಿ: ನಾಳೆ ಹಿಂದು ಮಹಾ ಗಣಪತಿ ವಿಸರ್ಜನೆ

ಹೊಸದಿಗಂತ ವರದಿ ಕಲಬುರಗಿ:

ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ 21 ದಿನಗಳ ಕಾಲ ಪ್ರತಿಷ್ಟಾಪನೆ ಮಾಡಲಾದ ಹಿಂದು ಮಹಾ ಗಣಪತಿಯನ್ನು ನಾಳೆ ಮಂಗಳವಾರ ಬೆಳಿಗ್ಗೆ ವಿಸಜ೯ನಾ ಕಾಯ೯ಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಿಂದು ಜಾಗೃತಿ ಸೇನೆಯ ತಾಲೂಕು ಅಧ್ಯಕ್ಷ ಶಂಕರ ಚೋಕಾ ತಿಳಿಸಿದರು.

ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಳೆ ವಿಜಸ೯ನೆಗೂ ಮುನ್ನ ಬೆಳಿಗ್ಗೆ ಸೇನೆಯ ವತಿಯಿಂದ ರಕ್ತದಾನ ಶಿಬಿರ, ಆರೋಗ್ಯ ಶಿಬಿರ ಹಾಗೂ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ ಕಾಡ್೯ ಗಳನ್ನು ವಿತರಿಸುವ ಕಾಯ೯ಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ವಿಸಜ೯ನಾ ಕಾಯ೯ಕ್ರಮಕ್ಕೆ ಹವಾ ಮಲ್ಲಿನಾಥ ಮಹಾರಾಜರು ಸೇರಿದಂತೆ ಮಾಶಾಳ,ನ ಕೇದಾರ ಶ್ರೀಗಳು,ರಟಕಲ ಸಿದ್ದರಾಮ ಶ್ರೀಗಳು,ಚನ್ನಮಲ್ಲರುದ್ರ ಶಿವಾಚಾರ್ಯರು ಸಹಿತ ಹಲವು ಮಠಾಧೀಶರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಇದಕ್ಕೂ ಮುನ್ನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.ನಂತರ ಹಲವು ಮಠಾಧೀಶರು ನೇತೃತ್ವದಲ್ಲಿ ಭವ್ಯವಾದ ಮೆರವಣಿಗೆ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ ಸ್ವಾದಿ,ಗೌರಿಶಂಕರ ಕಿಣ್ಣಿ, ಶ್ರೀಕಾಂತ್ ರೆಡ್ಡಿ ಸೇನೆಯ ಪ್ರಮುಖರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!