ಭರಣಿ ನಕ್ಷತ್ರದ ಬಗೆಗಿನ ಕೆಲವು ಕುತೂಹಲಕಾರಿ ಸಂಗತಿಗಳನ್ನು ತಿಳಿದುಕೊಳ್ಳಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹಿಂದೂ ಜ್ಯೋತಿಷ್ಯದ ಪ್ರಕಾರ ಭರಣಿಯು ಎರಡನೇ ನಕ್ಷತ್ರ. ಭರಣಿ ಎಂದರೆ ಪೋಷಿಸುವವನು ಎಂದರ್ಥ. ಸಾವಿನ ದೇವತೆ ಯಮ ಧರ್ಮರಾಜ ಭರಣಿ ನಕ್ಷತ್ರವನ್ನು ಆಳುತ್ತಾನೆ. ಬೆಂಕಿ ಮತ್ತು ಶಕ್ತಿಯ ಸಮಾಗಮವಾದ ಶುಕ್ರನು ಭರಣಿ ನಕ್ಷತ್ರವನ್ನು ಪ್ರತಿನಿಧಿಸುವುದರಿಂದ ಭರಣಿ ನಕ್ಷತ್ರದವರು ಹೆಚ್ಚಿನ ಸೌಂದರ್ಯ, ಅಗಾಧ ಚೈತನ್ಯ ಹಾಗೂ ಕಾಂತಿಯುವ ಕಣ್ಣುಗಳನ್ನು ಹೊಂದಿರುತ್ತಾರೆ. ಈ ರಾಶಿಯವರು ಮಕ್ಕಳಿದ್ದಾಗಿನಿಂದಲೇ ತಮ್ಮ ವ್ಯಕ್ತಿತ್ವದಿಂದ ಜನರನ್ನು ಆಕರ್ಷಿಸುತ್ತಾರೆ. ಈ ರಾಶಿಯವರು ಕ್ರೀಡೆ ಹಾಗೂ ಕಠಿಣ ಪರಿಶ್ರಮ ಬೇಡುವ ಶ್ರಮದಾಯಕ ಚಟುವಟಿಕೆಗಳಲ್ಲಿ ತೊಡಗಲಾರರು. ಆದರೆ ಕುಳಿತಲ್ಲಿಂದಲೇ ಅವರು ದೊಡ್ಡ ಕೆಲಸಗಳನ್ನು ನಿರ್ದೇಶಿಸಬಲ್ಲರು. ಆದ್ದರಿಂದರೆ ಭರಣಿ ನಕ್ಷತ್ರದಲ್ಲಿ ಹುಟ್ಟಿದವರು ಧರಣಿ ಆಳುತ್ತಾರೆ ಎಂಬ ಗಾದೆ ಮಾತು ಹುಟ್ಟಿದೆ. ಇನ್ನು ಆರೋಗ್ಯದ ನಿಟ್ಟಿನಲ್ಲಿ ಗಮನಿಸುವುದಾದರೆ ವಯಸ್ಕರಿಗೆ ಸ್ಥೂಲಕಾಯ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಮತ್ತೊಂದು ವಿಚಾರವೆಂದರೆ ಭರಣಿ ನಕ್ಷತ್ರದವರು ಸೂಕ್ಷ್ಮಮತಿಗಳು. ತಮ್ಮ ಸೂಕ್ಷ್ಮಜ್ಞಾನದ ಬಲದಿಂದ ಅವರು ತಮ್ಮನ್ನು ರಕ್ಷಿಸಿಕೊಳ್ಳಲು ಸಶಕ್ತರಾಗಿರುತ್ತಾರೆ. ಭರಣಿ ನಕ್ಷತ್ರದ ಕುರಿತಾಗಿ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳಲು ಈ ವಿಡಿಯೋ ಗಮನಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!