ಕಲಬುರಗಿ ಉತ್ತರ, ದಕ್ಷಿಣ ಅಭ್ಯರ್ಥಿಗಳ ಚುನಾವಣಾ ಭರಾಟೆ: ಬೆಂಬಲಿಗರೊಂದಿಗೆ ಚಂದು ಪಾಟೀಲ್ ನಾಮಪತ್ರ ಸಲ್ಲಿಕೆ

ಹೊಸದಿಗಂತ ವರದಿ, ಕಲಬುರಗಿ:

ಕಲಬುರಗಿ ಉತ್ತರ ಮತಕ್ಷೇತ್ರದ ಬಿಜೆಪಿ ಅಭ್ಯಥಿ೯ ಚಂದು ಪಾಟೀಲ್ ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಸೋಮವಾರ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಚುನಾವಣಾಧಿಕಾರಿಗೆ ತಮ್ಮ ಉಮೇದುವಾರಿಕೆಯ ನಾಮಪತ್ರ ವನ್ನು ಸಲ್ಲಿಕೆ ಮಾಡಿದರು.

ಇದಕ್ಕೂ ಮುನ್ನ ನಗರದ ಐತಿಹಾಸಿಕ ಶ್ರೀ ಶರಣಬಸವೇಶ್ವರರ ಸೇರಿದಂತೆ ಇತರ ದೇವಸ್ಥಾನಗಳಿಗೆ ದಂಪತಿ ಸಮೇತ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದುಕೊಂಡರು. ತದನಂತರ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನೊಳಗೊಂಡ ಹಲವು ಮುಖಂಡರೊಂದಿಗೆ ತೆರಳಿ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದರು.

ನಗರದ ನೆಹರು ಗಂಜ್ ಪ್ರದೇಶದ ನಗರೇಶ್ವರ ಶಾಲೆಯಿಂದ ತೆರೆದ ವಾಹನದಲ್ಲಿ ಸಾವಿರಾರು ಕಾಯ೯ಕತ೯ರು,ಮುಖಂಡರೊಂದಿಗೆ ಮೆರವಣಿಗೆ ಮೂಲಕ ಭಜ೯ರಿ ಶಕ್ತಿ ಪ್ರದಶ೯ನಗೈದರು.

ಇನ್ನೂ ಆದೇ ರೀತಿ ಕಲಬುರಗಿ ದಕ್ಷಿಣ ಮತಕ್ಷೇತ್ರದ ಹಾಲಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ತಮ್ಮ ಅಸಂಖ್ಯಾತ ಬೆಂಬಲಿಗರೊಂದಿಗೆ ಸೋಮವಾರ ಕಲಬುರಗಿ ಮಹಾ ನಗರ ಪಾಲಿಕೆಯಲ್ಲಿ ಚುನಾವಣಾಧಿಕಾರಿಗೆ ತಮ್ಮ ಉಮೇದುವಾರಿಕೆಯ ನಾಮಪತ್ರ ವನ್ನು ಸಲ್ಲಿಕೆ ಮಾಡಿದರು.

ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್,ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್, ಮುಖಂಡ ಶಿವಕಾಂತ್ ಮಹಾಜನ್, ಹಿರಿಯ ಮುಖಂಡ ಕೃಷ್ಣ ಕುಲಕರ್ಣಿ, ದಯಾಘನ್ ಧಾರವಾಡಕರ್,ರಾಜು ವಾಡೇಕರ್,ಮಹಾಪೌರ ವಿಶಾಲ ದಗಿ೯ ಸೇರಿದಂತೆ ಹಲವು ಮುಖಂಡರು ನಾಮಪತ್ರ ವೇಳೆ ಸಾತ್ ನೀಡಿದರು.

ಇದಕ್ಕೂ ಮುನ್ನ ನಗರದ ಆದಶ೯ ಮೆಡಕಲ್ ಹಾಲ್,ನಿಂದ ತೆರೆದ ವಾಹನದಲ್ಲಿ ಸಾವಿರಾರು ಕಾಯ೯ಕತ೯ರೊಂದಿಗೆ ಮೆರವಣಿಗೆ ಮುಖಾಂತರ ಶಕ್ತಿ ಪ್ರದಶ೯ನ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!