ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರು ಯಕ್ಷಗಾನ ಮೇಳಗಳನ್ನೊಳಗೊಂಡ ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಯಕ್ಷಗಾನ ಮೇಳಗಳ ತಿರುಗಾಟ ಆರಂಭವಾದ ಒಂದು ತಿಂಗಳ ಬಳಿಕ, ಇಂದಿನಿಂದ (ಜ.೧೪) ಕಾಲಮಿತಿಯ ಬದಲಾಗಿ ಬೆಳಿಗ್ಗಿನವರೆಗೆ ಯಕ್ಷಗಾನ ನಡೆಯಲಿದೆ ಎಂದು ಹೇಳಿಕೆ ನೀಡಿದ್ದ ಕಟೀಲು ದೇಗುಲದ ಆಡಳಿತ ಮಂಡಳಿ ಸ್ಪಷ್ಟ ನಿರ್ಧಾರವನ್ನು ಇನ್ನೂ ತಿಳಿಸಿಲ್ಲ.
ಆಡಳಿತ ಮಂಡಳಿಯ ಹೇಳಿಕೆ ಪ್ರಕಾರ ಭಾನುವಾರದಿಂದ ಬೆಳಿಗ್ಗಿನವರೆಗೆ ಯಕ್ಷಗಾನ ನಡೆಯಬೇಕಾಗಿತ್ತು, ಈ ಮಧ್ಯೆ ದ.ಕ. ಜಿಲ್ಲಾಧಿಕಾರಿ ಧ್ವನಿವರ್ಧಕ ನಿಯಮವನ್ನು ಪಾಲಿಸದಿದ್ದರೆ ಆಡಳಿತ ಮಂಡಳಿಯೇ ಹೊಣೆ ಎಂದು ಆದೇಶ ಮಾಡಿರುವ ಹಿನ್ನಲೆ. ಕಟೀಲು ಮೇಳದ ಆಟಗಳ ಪ್ರದರ್ಶನಗಳನ್ನು ಇಡೀ ರಾತ್ರಿಗೆ ವಿಸ್ತರಿಸಲು ಕೆಲವು ತಾಂತ್ರಿಕ ತೊಂದರೆಗಳು ಇರುವುದರಿಂದ ಸದ್ಯಕ್ಕೆ ಕಾಲಮಿತಿ ಪ್ರದರ್ಶನಗಳನ್ನು ಮುಂದುವರಿಸಿ ಬಳಿಕ ವ್ಯವಸ್ಥಿತ ರೀತಿಯಲ್ಲಿ ಇಡೀ ರಾತ್ರಿಯ ಯಕ್ಷಗಾನ ಪ್ರದರ್ಶನಗಳನ್ನು ನಡೆಸಲಾಗುವುದು ಎಂದು ದೇಗುಲದ ಆಡಳಿತ ಮಂಡಳಿಯ ಮೂಲಗಳು ತಿಳಿಸಿವೆ.