ಕಾಳಿದೇವಿ ಬಾಯಲ್ಲಿ ಸಿಗರೇಟು ವಿಚಾರ ಯಾಕೆ ವಿರೋಧಿಸಿಲ್ಲ: ಈಶ್ವರಪ್ಪ ಆಕ್ರೋಶ

ಹೊಸ ದಿಗಂತ ವರದಿ, ಕಲಬುರಗಿ:

ಮಹ್ಮದ್ ಪೈಗಂಬರ್‌ರ ಅಪಮಾನ ಮಾಡಿದ್ದಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗಿತ್ತು, ಆದರೆ ಈಗ ಕಾಳಿದೇವಿ ಬಾಯಲ್ಲಿ ಸಿಗರೇಟು ಇಟ್ಟಿದ್ದರ ಬಗ್ಗೆ ಯಾರು ವಿರೋಧಿಸಿಲ್ಲ. ಈ ವಿಚಾರವನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಯಾಕೆ ಖಂಡಿಸಿಲ್ಲ? ನಮ್ಮ ರಕ್ತ ಕುದಿಯಲ್ವ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 75 ವರ್ಷಗಳಿಂದ ಹಿಂದೂ ಧರ್ಮಕ್ಕೆ ಆಗುತ್ತಿರುವ ಅನ್ಯಾಯವನ್ನು ಸಹಿಸಿಕೊಂಡಿದ್ದೇವೆ.
ಮುಸಲ್ಮಾನರನ್ನು ವೈಭವಿಕರಿಸುವ ನಾಟಕವನ್ನು ಹಿಂದೂ ಸಂಘಟನೆಗಳು ಸ್ಥಗೀತಗೊಳಿವೆ.
ಇದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯನವರು ಖಂಡಿಸಿದರು, ಆದರೆ ಹರ್ಷನ ಕೊಲೆಯನ್ನು ಅವರು ಖಂಡಿಸಲಿಲ್ಲ ಎಂದು ಕಿಡಿಕಾರಿದರು. ಹರ್ಷ ಮತ್ತು ಕನ್ಹಯ್ಯಲಾಲ್ ಕೊಲೆ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲ್ಲಬೇಕು ಎಂದು ಸಾಕಷ್ಟು ಭಯೋತ್ಪಾದಕರು ಸಂಚು ರೂಪಿಸಿದ್ದಾರೆ, ಆದರೆ ದೇಶದ 135 ಕೋಟಿ ಜನರ ಆಶಿರ್ವಾದ ಇರುವವರೆಗೆ ಅವರಿಗೆ ಎನು ಮಾಡಲು ಸಾಧ್ಯವಿಲ್ಲ ಎಂದರು.

ಹೈದ್ರಾಬಾದ್‌ನಲ್ಲಿ ಮೋದಿಯವರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿ, ಮೋದಿ ಅವರು ಕೇವಲ ಭಾರತದ ಪ್ರಧಾನಿ ಅಷ್ಟೇ ಅಲ್ಲ, ಅವರು ವಿಶ್ವ ನಾಯಕ ಆಗಿದ್ದಾರೆ, ಅದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!