ಕಾಳಿ ಸಿನಿಮಾ ತಡಯಾಜ್ಞೆ:ಲೀನಾಗೆ ಸಮನ್ಸ್ ಜಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಳಿ ದೇವಿಯನ್ನು ಧೂಮಪಾನ ಮಾಡುವ ಮಹಿಳೆಯಂತೆ ಚಿತ್ರಿಸಿ ಭಾರಿ ಟೀಕೆಗೆ ಗುರಿಯಾದ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರಿಗೆ ದಿಲ್ಲಿ ಸೆಷನ್ಸ್ ನ್ಯಾಯಾಲಯವು ಹೊಸ ಸಮನ್ಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆಯನ್ನು ನವೆಂಬರ್ 1 ರಂದು ನಡೆಸಲಾಗುವುದು ಎಂದು ಹೇಳಿದೆ.

ವಿಚಾರಣೆಯ ಸಂದರ್ಭದಲ್ಲಿ ಲೀನಾ ಮಣಿಮೇಕಲೈ ಅವರು ಉಪಸ್ಥಿತಿ ಇರಿರಬೇಕು, ಯಾವುದೇ ಆದೇಶವನ್ನು ನೀಡುವ ಮೊದಲು ಪ್ರತಿವಾದಿಯ ವಾದವನ್ನು ಆಲಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಲೀನಾ ಹಾಗೂ ಟೂರಿಂಗ್ ಟಾಕೀಸ್ ಮೀಡಿಯಾ ವರ್ಕ್ಸ್ ಪ್ರೈ.ಲಿ ಅವರಿಗೆ ಈ ಹಿಂದೆ ನೀಡಿದ್ದ ಸಮನ್ಸ್ ತಲುಪಿಲ್ಲ.ಆದ್ದರಿಂದ ವಾಟ್ಸಾಆಪ್, ಇಮೇಲ್ ಮೂಲಕ ಹೊಸ ಸಮನ್ಸ್ ನೀಡಬೇಕು ಎಂದು ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಅಭಿಷೇಕ್ ಕುಮಾರ್ ನಿರ್ದೇಶಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!