ಮೆಟ್ರೋ 3ನೇ ಮಾರ್ಗದ ಪ್ರಾಯೋಗಿಕ ಸಂಚಾರ ಶುರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮುಂಬೈ ಮೆಟ್ರೊ ನಿಗಮವು (ಎಂಎಂಆರ್‌ಸಿಎಲ್) ಅರೆ ಕಾಲೋನಿಯ ಸಾರಿಪುಟ್ ನಗರದಲ್ಲಿ, ಕೊಲಾಬಾ-ಬಾಂದ್ರಾ-ಸಿಪ್‌ಝಡ್ ನಡುವಿನ ಮೆಟ್ರೋ ಮೂರನೇ ಮಾರ್ಗದ ಪ್ರಾಯೋಗಿಕ ಸಂಚಾರವನ್ನು ಮಂಗಳವಾರ ಪ್ರಾರಂಭಿಸಿತು. ಪ್ರಾಯೋಗಿಕ ಸಂಚಾರಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಚಾಲನೆ ನೀಡಿದರು.

ಈ ಯೋಜನೆಯು 33.5 ಕಿ.ಮಿ. ಉದ್ದದ ಸುರಂಗ ಮಾರ್ಗವನ್ನು ಹೊಂದಿದ್ದು, ದಕ್ಷಿಣ ಮುಂಬೈನಿಂದ ಪಶ್ಚಿಮದ ಪನಗರಗಳಿಗೆ ಸಂಪರ್ಕ ಕಲ್ಪಿಸಿಕೊಡುತ್ತದೆ. ಈ ಮಾರ್ಗವು ಉಪನಗರಗಳ ನಿವಾಸಿಗಳ ಸಂಚಾರ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!