Wednesday, June 29, 2022

Latest Posts

ಗಾಂಧೀಜಿ ವಿರುದ್ಧ ಅವಹೇಳನಕಾರಿ ಪದಬಳಕೆ ಪ್ರಕರಣ; ಕಾಳಿ ಚರಣ್ ಮಹಾರಾಜ್ ಗೆ ಜಾಮೀನು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಾಯ್ಪುರದಲ್ಲಿ ನಡೆದಿದ್ದ ಧರ್ಮ ಸಂಸದ್​ನಲ್ಲಿ ಮಹಾತ್ಮಗಾಂಧಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ ಆರೋಪದ ಮೇಲೆ ಕಳೆದ ಮೂರು ತಿಂಗಳಿನಿಂದ ಜೈಲಿನಲ್ಲಿರುವ ಕಾಳಿ ಚರಣ್ ಮಹಾರಾಜ್ ಅವರಿಗೆಛತ್ತೀಸ್​ಗಢದ ಬಿಲಾಸ್​ಪುರ ಹೈಕೋರ್ಟ್ ಜಾಮೀನು ನೀಡಿದೆ.
ಶನಿವಾರ ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ್ ಸಿಂಗ್ ಚಾಂಡೇಲ್ ಜಾಮೀನು ಅರ್ಜಿಯನ್ನು ಪುರಸ್ಕರಿಸಿದ್ದಾರೆ. ಇದಕ್ಕೂ ಮುನ್ನ ಅವರ ಜಾಮೀನು ಅರ್ಜಿಯನ್ನು ಕೆಳ ನ್ಯಾಯಾಲಯ ತಿರಸ್ಕರಿಸಿತ್ತು. ಹೀಗಾಗಿ, ವಕೀಲ ಮೆಹುಲ್ ಜೆಥಾನಿ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು.ಮಹಾತ್ಮ ಗಾಂಧಿ ಬಗ್ಗೆ ಕಾಳಿ ಚರಣ್ ಮಹಾರಾಜ್ ಅವರು ಗಾಧೀಜಿ ಕುರಿತಾಗಿ ಮಾತನಾಡಿದ್ದ ವಿಡಿಯೋ ವೈರಲ್‌ ಆದ ಬಳಿಕ ಮಧ್ಯಪ್ರದೇಶದ ಖುಜರಾಹೋದಲ್ಲಿ 2021ರ ಡಿಸೆಂಬರ್​ 30ರಂದು ರಾಯ್ಪುರ ಪೊಲೀಸರು ಬಂಧಿಸಿದ್ದರು. ಇದೀಗ ಛತ್ತೀಸ್​ಗಢ್​ ಹೈಕೋರ್ಟ್​ ಕಾಳಿಚರಣ್​​ರಿಗೆ ಷರತ್ತುಬದ್ಧ ಜಾಮೀನು ನೀಡಿದೆ. ವಿಚಾರಣೆಗಾಗಿ ನ್ಯಾಯಾಲಯಕ್ಕೆ ತಪ್ಪದೆ ಹಾಜರಾಗಬೇಕು ಎಂದೂ ಸೂಚಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss