Saturday, December 2, 2023

Latest Posts

ಕಲ್ಲಪ್ಪ ಬಸವಂತರಾವ್ ಚಿಟ್ಟಾಗೆ ‘ಉತ್ತಮ ಸೇವಾ’ ಪ್ರಶಸ್ತಿ

ಹೊಸ ದಿಗಂತ ವರದಿ, ಬೀದರ್:

ಬೀದರ್ ತಾಲೂಕಿನ ಬಾಪುರ ಗ್ರಾಮದ ಕಲ್ಲಪ್ಪ ಬಸವಂತರಾವ್ ಚಿಟ್ಟಾ ಅವರಿಗೆ ನಾರಾಯಣ ನೇತ್ರಾಲಯ ವತಿಯಿಂದ ಕೊಡಲಾಗುವ ಉತ್ತಮ ಸೇವಾ ಪ್ರಶಸ್ತಿ ದೊರಕಿದೆ.
ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ನೇತ್ರಾಲಯದ ಅಧ್ಯಕ್ಷ ಡಾ. ಭುಜಂಗ ಶೆಟ್ಟಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.
28 ವರ್ಷಗಳಿಂದ ನೇತ್ರ ಶಿಬಿರ ಸಹಾಯಕರಾಗಿ ಸಲ್ಲಿಸುತ್ತಿರುವ ಸೇವೆ ಹಾಗೂ ಸಾಮಾಜಿಕ ಕಳಕಳಿಗೆ ಅವರಿಗೆ ಪ್ರಶಸ್ತಿ ಸಂದಿದೆ. ಕಲ್ಲಪ್ಪ ಚಿಟ್ಟಾ ಅವರಿಗೆ ಪ್ರಶಸ್ತಿ ಲಭಿಸಿದ್ದಕ್ಕೆ ಅನೇಕರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!