CINEMA | ಕಮಲ್ ಹಾಸನ್ ನಿರ್ಮಾಣದ ಚಿತ್ರಕ್ಕೆ ಮಗಳಿಗಿಲ್ಲ ಚಾನ್ಸ್, ಹಾಗಿದ್ರೆ ಹೀರೋಯಿನ್ ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಮಲ್ ಹಾಸನ್ ಪ್ರೊಡಕ್ಷನ್ ಹೌಸ್ ರಾಜ್ ಕಮಲ್ ಇಂಟರ್ನ್ಯಾಷನಲ್‌ನಲ್ಲಿ ಮೂಡಿ ಬಂದಿರುವ ವಿಕ್ರಮ್ ಭರ್ಜರಿ ಹಿಟ್ ಆಗಿದೆ.

ಇದೀಗ ಇದೇ ಪ್ರೊಡಕ್ಷನ್ ಹೌಸ್‌ನಿಂದ ಮತ್ತೊಂದು ಸಿನಿಮಾ ಮೂಡಿಬರಲಿದೆ. ನಟ ಶಿವಕಾರ್ತಿಕೇಯನ್ ಸಿನಿಮಾಗೆ ಹೀರೋ ಆಗಿದ್ದು, ಸಿನಿಮಾಗೆ #ಎಸ್‌ಕೆ21 ಎಂದು ಹೆಸರಿಡಲಾಗಿದೆ.

ಈ ಸಿನಿಮಾ ಕಥೆಯನ್ನು ರಾಜ್ ಕುಮಾರ್ ಪೆರಿಯಸಾಮಿ ಬರೆದು ನಿರ್ದೇಶಿಸಲಿದ್ದಾರೆ. ಶಿವಕಾರ್ತಿಕೇಯನ್‌ರನ್ನು ಈ ರೀತಿ ಎಂದೂ ನೋಡಿರೋದಕ್ಕೆ ಸಾಧ್ಯವೇ ಇಲ್ಲ ಎಂದು ತಂಡ ಹೇಳಿದೆ. ಕಮಲ್ ಪ್ರೊಡಕ್ಷನ್ಸ್ ಎಂದ ಮಾತ್ರಕ್ಕೆ ಇಲ್ಲಿ ಕಮಲ್ ಪುತ್ರಿ ಶ್ರುತಿ ಹಾಸನ್ ಹೀರೋಯಿನ್ ಅಲ್ಲ, ನಟಿ ಸಾಯಿ ಪಲ್ಲವಿ ಈ ಸಿನಿಮಾಗೆ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ. ಕಾಶ್ಮೀರದಲ್ಲಿ ಎರಡು ತಿಂಗಳು ಶೂಟಿಂಗ್‌ಗೆ ಎಲ್ಲ ತಯಾರಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!