ಪ್ರಧಾನಿ ಮೋದಿ ರೋಡ್ ಶೋ ಆರಂಭ, ದಾರಿಯುದ್ದಕ್ಕೂ ಹೂವಿನ ರಾಶಿ, ನಿಲ್ಲೋಕೂ ಜಾಗ ಇಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಇಂದು ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ ನಡೆಸುತ್ತಿದ್ದಾರೆ.

ಬರೋಬ್ಬರಿ ಎರಡು ಗಂಟೆಗಳ ರೋಡ್ ಶೋ ಇದಾಗಿದ್ದು, ಒಟ್ಟಾರೆ ೩೪ ರಸ್ತೆಗಳಲ್ಲಿ ಪ್ರಧಾನಿ ಮೋದಿ ರೋಡ್ ಶೋ ನಡೆಯಲಿದೆ. ಈಗಾಗಲೇ ರೋಡ್ ಶೋ ಆರಂಭವಾಗಿದ್ದು, ಸಿಲಿಕಾನ್ ಸಿಟಿ ಕೇಸರಿಮಯವಾಗಿದೆ.

ಬೆಂಗಳೂರಿನ ಸೋಮೇಶ್ವರ ಸಭಾಭವನದಿಂದ ರೋಡ್ ಶೋ ಆರಂಭವಾಗಿದ್ದು, ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ ಕೂಡ ಪ್ರಧಾನಿ ಮೋದಿ ಜತೆಗಿದ್ದಾರೆ. ಬೆಳಗ್ಗೆಯಿಂದಲೇ ಪ್ರಧಾನಿ ಮೋದಿ ನೋಡಲು ಜನರು ರಸ್ತೆಗಳ ಇಕ್ಕೆಲದಲ್ಲಿ ಗುಂಪು ಗುಂಪಾಗಿ ನಿಂತಿದ್ದಾರೆ.

ರೋಡ್‌ಶೋ ಉದ್ದಕ್ಕೂ ಅಭಿಮಾನಿಗಳು ಹೂವಿನ ಮಳೆ ಸುರಿಸುತ್ತಿದ್ದು, ಮೋದಿ ಮೋದಿ ಎನ್ನುವ ಘೋಷಣೆ ಎಲ್ಲೆಡೆ ಮೊಳಗಿದೆ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!