ಜೂ.3ರಂದು ತೆರೆಗಪ್ಪಳಿಸಲಿದೆ ಕಮಲ್‌, ಫಹದ್ ಫಾಸಿಲ್, ವಿಜಯ್‌ ಸೇತುಪತಿ ನಟನೆಯ ʼವಿಕ್ರಮ್ʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ತಮಿಳು ಚಿತ್ರರಂಗದ ದಿಗ್ಗಜ ಕಮಮಲ್‌ ಹಸನ್‌ ನಟನೆಯ ಚಿತ್ರ ‘ವಿಕ್ರಮ್’ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಪ್ರೇಕ್ಷಕರು ಅತ್ಯಂತ ನಿರೀಕ್ಷೆಯಿಂದ ಕಾಯತ್ತಿರುವ ಚಿತ್ರ ಜೂನ್‌ 3 ರಂದು ವಿಶ್ವಾದ್ಯಂತ ಬಿಡುಗಡೆ ಕಾಣಲಿದೆ. ಖೈದಿ, ಮಾಸ್ಟರ್‌ ಚಿತ್ರಗಳ ಖ್ಯಾತಿಯ ನಿರ್ದೇಶಕ ಲೋಕೇಶ್ ಕನಕರಾಜ್ ಆಕ್ಷನ್‌ ಕಟ್‌ ಹೇಳಿರುವ ಚಿತ್ರದಲ್ಲಿ ತಮಿಳಿನ ಸ್ಟಾರ್‌ ವಿಜಯ್‌ ಸೇತುಪತಿ, ಮಳೆಯಾಳಂ ಚಿತ್ರರಂಗದ ಖ್ಯಾತ ನಟ ಫಹದ್ ಫಾಸಿಲ್ ಕಮಲ್‌ ಅವರೊಂದಿಗೆ ಕಾಣಸಿಕೊಂಡಿದ್ದಾರೆ. ತಮಿಳು, ಕನ್ನಡ, ತೆಲುಗು, ಮಳೆಯಾಳಂ, ಹಿಂದಿಯಲ್ಲಿ ಚಿತ್ರ ತೆರೆಗೆ ಬರಲಿದೆ. ಚಿತ್ರ ದೊಡ್ಡ ಬಜೆಟ್‌ ನಲ್ಲಿ ನಿರ್ಮಾಣವಾಗಿದೆ. ಚಿತ್ರದ ಪೋಸ್ಟರ್‌, ಟೀಸರ್‌ ಗೆ ಅಭಿಮಾನಿಗಳಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!