ಗೊತ್ತಾಗದೇ ತಾಯಿಯ ಮಾತ್ರೆಗಳನ್ನು ಚಾಕೋಲೆಟ್ ಎಂದು ಸೇವಿಸಿ ಕಂದಮ್ಮ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರದುರ್ಗದ ಕಡಬನಕಟ್ಟೆ ಗ್ರಾಮದಲ್ಲಿ ನಾಲ್ಕು ವರ್ಷದ ಮಗು ತನ್ನ ತಾಯಿಯ ಮಾತ್ರೆಗಳನ್ನು ಚಾಕೋಲೆಟ್ ಎಂದು ತಿಳಿದು ಸೇವಿಸಿ ಮೃತಪಟ್ಟಿದೆ.

ನಾಲ್ಕು ವರ್ಷದ ಹೃತ್ವಿಕ್ ತಾಯಿಗೆ ಕೆಲ ದಿನಗಳ ಹಿಂದೆ ಶಸ್ತ್ರಚಿಕಿತ್ಸೆಯಾಗಿತ್ತು. ಇದರಿಂದಾಗಿ ವೈದ್ಯರು ಮಾತ್ರೆಗಳನ್ನು ನೀಡಿದ್ದರು. ಹೃತ್ವಿಕ್ ಅದನ್ನು ಚಾಕೋಲೆಟ್ ಎಂದು ತಿಳಿದು ಸೇವಿಸಿದ್ದಾನೆ. ತಕ್ಷಣವೇ ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂರು ದಿನಗಳ ಚಿಕಿತ್ಸೆ ನಂತರ ಹೃತ್ವಿಕ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಪೋಷಕರೇ ಜಾಗ್ರತೆ, ಯಾವ ವಸ್ತು ಯಾವ ಸಮಯದಲ್ಲಿ ಮಕ್ಕಳ ಜೀವಕ್ಕೆ ಕುತ್ತು ತರುತ್ತದೆಯೋ ತಿಳಿಯುವುದಿಲ್ಲ. ಸದಾ ಮಕ್ಕಳ ಮೇಲೆ ನಿಗಾ ಇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!