‘ನನ್ನ ಸ್ನೇಹಿತ ನಜೀಮ್’: ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿದ ಕಾಶ್ಮೀರದ ಯುವಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಬಕ್ಷಿ ಕ್ರೀಡಾಂಗಣದಲ್ಲಿ ವಿಕಸಿತ ಭಾರತ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಫಲಾನುಭವಿಯೊಂದಿಗೆ ಮಾತನಾಡುತ್ತಿದ್ದಾಗ, ನಾಜಿಮ್ ಎಂಬಾತ ಪ್ರಧಾನಿ ಮೋದಿಯವರೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದರು. ಈ ಯುವಕನ ಆಸೆಯನ್ನು ಈಡೇರಿಸಿದ ಪ್ರಧಾನಿ ಮೋದಿ, ಈ ಸೆಲ್ಫಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು ನನ್ನ ಕಾಶ್ಮೀರ ಸ್ನೇಹಿತ ನಜೀಮ್ ಎಂದು ಬರೆದಿದ್ದಾರೆ.

ಶ್ರೀನಗರದ ಬಕ್ಷಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ವಿಕಸಿತ ಭಾರತ ಕಾರ್ಯಕ್ರಮದಲ್ಲಿ ಫಲಾನುಭಿಗಳ ಜೊತೆ ಮೋದಿ ಸಂವಾದ ನಡೆಸಿದ್ದಾರೆ. ಇದೇ ವೇಳೆ 64,000 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ವಿಕಸಿತ ಭಾರತ ಯೋಜನಯಡಿಯಲ್ಲಿ ಸರ್ಕಾರದ ಸೌಲಭ್ಯ ಬಳಸಿಕೊಂಡು ಸ್ವಂತ ಉದ್ಯಮ ಆರಂಭಿಸಿ ಯಶಸ್ಸು ಸಾಧಿಸಿದ ನಜೀಮ್ ನಜೀರ್ ಇಂದು ಪ್ರಧಾನಿ ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ದೇಶಾದ್ಯಂತ ಸುದ್ದಿಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ನಜೀಮ್, ನಿಮ್ಮ(ಮೋದಿ) ಜೊತೆ ಸೆಲ್ಫಿ ಬೇಕು ಎಂದು ಮನವಿ ಮಾಡಿದ್ದಾನೆ. ವಿಕಸಿತ ಭಾರತ ಫಲಾನುಭವಿಯ ಸಾಧನೆ ಮೆಚ್ಚಿದ ಮೋದಿ, ಕಾರ್ಯಕ್ರಮದ ಬಳಿಕ ಸೆಲ್ಫಿ ನೀಡುವುದಾಗಿ ಹೇಳಿದ್ದಾರೆ. ಇದರಂತೆ ಕಾರ್ಯಕ್ರಮದ ಬಳಿಕ ನಜೀಮ್ ಜೊತೆ ಮೋದಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಕುರಿತು ಸಂತಸ ಹಂಚಿಕೊಂಡ ಮೋದಿ, ಕಾಶ್ಮೀರದ ನನ್ನ ಸ್ನೇಹಿತ ನಜೀಮ್ ಜೊತೆಗಿನ ಸೆಲ್ಫಿ ಯಾವತ್ತೂ ನೆನಪಿನಲ್ಲಿ ಉಳಿಯಲಿದೆ. ನಜೀಮ್ ಸಾಧನೆ ನನ್ನ ಸಂಭ್ರಮ ಇಮ್ಮಡಿಗೊಳಿಸಿದೆ. ಸಾರ್ವಜನಿಕ ಕಾರ್ಯಕ್ರಮದಲ್ಲಿ ನಜೀಮ್ ಸೆಲ್ಫಿಗೆ ಮನವಿ ಮಾಡಿದ್ದ. ನಜೀಮ್ ಜೊತೆ ಸೆಲ್ಫಿ ತೆಗೆದಿದ್ದೇನೆ. ನಜೀಮ್ ಮುಂದಿನ ಜೀವನಕ್ಕೆ ಯಶಸ್ಸು ಕೋರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ನಜೀಮ್ ಯಾರು?
ನಜೀಮ್ 2018ರಲ್ಲಿ ಜೇನು ನೋಣಗಳನ್ನು ಸಾಕಿ ಜೇನು ವಹಿವಾಟು ಆರಂಬಿಸಿದ್ದ. 10ನೇ ತರಗತಿಯಲ್ಲಿರುವಾಗ ಜೇನು ಕೃಷಿ ಆರಂಭಗೊಂಡಿತು. ಮನೆಯ ಮಹಡಿ ಮೇಲೆ ಜೇನು ಬಾಕ್ಸ್ ಇರಿಸಿ ಜೇನು ತೆಗೆಯಲು ಮುಂದಾದ. 2019ರಲ್ಲಿ ಸರ್ಕಾರದ ಯೋಜನೆಯಡಿಯಲ್ಲಿ 25 ಜೇನು ಬಾಕ್ಸ್ ಖರೀದಿಸಲಾಯಿತು. ಇದಕ್ಕೆ ಶೇಕಡಾ 50 ರಷ್ಟು ಸಬ್ಸಿಡಿ ಸಿಕ್ಕಿತ್ತು. 25 ಬಾಕ್ಸ್ ಜೇನು ಗೂಡಿನಿಂದ 75 ಕೆಜಿ ಜೇನು ತೆಗೆದು 60,000 ರೂಪಾಯಿ ಆದಾಯ ಗಳಿಸಿದ್ದು. 2020ರಲ್ಲಿ ಪ್ರಧಾನ ಮಂತ್ರಿ PMEGP ಯೋಜನೆಯಡಿಯಲ್ಲಿ 5 ಲಕ್ಷ ರೂಪಾಯಿ ಸಾಲ ಪಡೆದು 200 ಬಾಕ್ಸ್ ಖರೀದಿಸಿದ್ದಾನೆ. ಇದೀಗ ಸುಸಜ್ಜಿತ ಜೇನು ಕೃಷಿ ನಡೆಸುತ್ತಾ ಭರ್ಜರಿ ಆದಾಯಗಳಿಸುತ್ತಿದ್ದಾನೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!