ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಸಂಸದೆ, ನಟಿ ಕಂಗನಾ ರಣೌತ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ರೈತರ ಪ್ರತಿಭಟನೆ ಕುರಿತು ಅವರ ಹೇಳಿಕೆಗಳು ವಿವಾದಕ್ಕೀಡಾಗಿದ್ದು, ಇದಕ್ಕೆ ಪಂಜಾಬ್ ಮಾಜಿ ಸಂಸದ ಮತ್ತು ಶಿರೋಮಣಿ ಅಕಾಲಿದಳದ ಹಿರಿಯ ನಾಯಕ ಸಿಮ್ರಂಜಿತ್ಸಿಂಗ್ ಮಾನ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಂಗನಾಗೆ ಅತ್ಯಾಚಾರದಲ್ಲಿ ಸಾಕಷ್ಟು ಅನುಭವವಿದೆ ಎಂದಿ ಹೇಳಿದ್ದಾರೆ.
ರೈತರ ಪ್ರತಿಭಟನೆಯ ಹಿಂದೆ ಚೀನಾ ಮತ್ತು ಅಮೆರಿಕ ಪಿತೂರಿ ನಡೆಸುತ್ತಿವೆ. ಮೇಲಾಗಿ ದೇಶದಲ್ಲಿ ಪ್ರಧಾನಿ ಮೋದಿ ಅವರ ಬಲಿಷ್ಠ ನಾಯಕತ್ವದಿಂದಾಗಿ ನಾವು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನಡೆಯುತ್ತಿದ್ದೇವೆ. ಕೇಂದ್ರದಲ್ಲಿ ಬಿಜೆಪಿ ಇಲ್ಲದ್ದಿದ್ದರೆ ಬಾಂಗ್ಲಾದೇಶಕ್ಕೆ ಬಂದ ಸ್ಥಿತಿ ಬರುತ್ತಿತ್ತು. ರೈತರ ಪ್ರತಿಭಟನೆ ಸ್ಥಳಗಳಲ್ಲಿ ಅತ್ಯಾಚಾರ, ಹತ್ಯೆ ಘಟನೆಗಳು ನಡೆದಿವೆ ಎಂದು ಕಂಗನಾ ಆರೋಪಿಸಿದ್ದರು. ಈ ಹೇಳಿಕೆಯನ್ನು ರೈತ ಸಂಘಗಳು ಖಂಡಿಸಿದ್ದವು.
ಇದೇ ವೇಳೆ ಕೋಲ್ಕತ್ತಾದ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಘಟನೆ ದೇಶದಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿದ್ದು, ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆಯೂ ಗಲಾಟೆ ನಡೆಯುತ್ತಿದೆ. ಈ ಎಲ್ಲವುಗಳಿಗೂ ಕಂಗನಾ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಈ ಎಲ್ಲವುದರ ಹಿನ್ನೆಲೆಯಲ್ಲಿ ಸಿಮ್ರಂಜಿತ್ಸಿಂಗ್ ಮಾನ್ ಪ್ರತಿಕ್ರಿಯಿಸಿದ್ದು, ಸೈಕ್ಲಿಸ್ಟ್‌ಗಳಿಗೆ ಸೈಕಲ್ ಸವಾರಿ ಮಾಡುವ ಅನುಭವವಿರುತ್ತದೆ. ಅದೇ ರೀತಿ ಕಂಗನಾಗೆ ಅತ್ಯಾಚಾರದ ಬಗ್ಗೆ ಸಾಕಷ್ಟುವಿದೆ, ಆದ್ದರಿಂದ ಅತ್ಯಾಚಾರ ಹೇಗೆ ನಡೆಯುತ್ತದೆ ಎಂಬುದನ್ನು ಅವರು ಜನರಿಗೆ ತಿಳಿಸಬೇಕು ಹೇಳಿದ್ದಾರೆ.
ಇದು ಕೊಳಕು ಸಂಸ್ಕೃತಿ, ಸಂಸದರೊಬ್ಬರು ಈ ರೀತಿ ಹೇಳಿಕೆ ನೀಡಿರುವುದು ದುರಾದೃಷ್ಟಕರ ಎಂದು ಬಿಜೆಪಿ ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮಹಿಳಾ ಆಯೋಗವೂ ಈ ಬಗ್ಗೆ ಗಂಭೀರವಾಗಿದೆ ಎನ್ನಲಾಗಿದೆ.