ಆರ್ಡರ್ ಇನ್ನೂ ರೆಡಿ ಆಗಿಲ್ಲವೇ ಎಂದು ಕೇಳಿದ್ದ ಗ್ರಾಹಕನನ್ನು ಕೊಂದ ಹೊಟೇಲ್ ಮಾಲೀಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯ ಟ್ಯಾಗೋರ್ ಗಾರ್ಡನ್‌ನಲ್ಲಿ ತಡರಾತ್ರಿ ಫುಡ್ ಆರ್ಡರ್‌ಗಾಗಿ ನಡೆದ ವಿವಾದದ ಹಿನ್ನೆಲೆಯಲ್ಲಿ ಗ್ರಾಹಕರೊಬ್ಬರ ಮೇಲೆ ಸೀಕ್ ಕಬಾಬ್ ರಾಡ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಈ ದಾಳಿಯಲ್ಲಿ ಆ ಗ್ರಾಹಕ ಸಾವನ್ನಪ್ಪಿದ್ದಾರೆ.

ದೆಹಲಿಯ ಚಂದ್ರ ವಿಹಾರ್‌ನ 29 ವರ್ಷದ ಹರ್ನೀತ್ ಸಿಂಗ್ ಸಚ್‌ದೇವ ಎಂಬ ಮೃತಪಟ್ಟ ವ್ಯಕ್ತಿ.

ಮಂಗಳವಾರ ರಾತ್ರಿ ಹರ್ನೀತ್ ಸಿಂಗ್ ಕಬಾವ್ ತಿನ್ನಲು ಹೊಟೇಲ್ ಗೆ ಹೋಗಿದ್ದರು. ಎಷ್ಟು ಹೊತ್ತಾದರೂ ಆರ್ಡರ್ ರೆಡಿಯಾಗದ ಹಿನ್ನೆಲೆಯಲ್ಲಿ ಅವರು ಗಲಾಟೆ ಮಾಡಿದ್ದರು. ಇದರಿಂದ ಕೋಪಗೊಂಡ ರೆಸ್ಟೋರೆಂಟ್ ಮಾಲೀಕರು ಮತ್ತು ಅವರ ಮಗ ಹರ್ನೀತ್ ಸಿಂಗ್ ಮೇಲೆ ಸುಮಾರು 10 ನಿಮಿಷಗಳ ಕಾಲ ಕಬಾಬ್​ ರಾಡ್​ನಿಂದಲೇ ಹಲ್ಲೆ ನಡೆಸಿದ್ದು, ಇದರಿಂದ ತೀವ್ರವಾಗಿ ಗಾಯಗೊಂಡು ಹರ್ನೀತ್ ಸಿಂಗ್ ಸಾವನ್ನಪ್ಪಿದ್ದಾರೆ.

ವೃತ್ತಿಯಲ್ಲಿ ಪೇಂಟರ್ ಆಗಿರುವ ಹರ್ನೀತ್ ಇಬ್ಬರು ಸ್ನೇಹಿತರೊಂದಿಗೆ ಕೇತನ್ ಫುಡ್ ಹೆಸರಿನ ಟೇಕ್-ಅವೇ ಹೊಟೇಲ್​ಗೆ ಭೇಟಿ ನೀಡಿದ್ದರು. ತಮ್ಮ ಆರ್ಡರ್​ ಅನ್ನು ಸ್ವೀಕರಿಸುವಲ್ಲಿ ದೀರ್ಘಕಾಲದ ವಿಳಂಬ ಮಾಡಿದ್ದರಿಂದ ಅಸಮಾಧಾನಗೊಂಡಿದ್ದ ಅವರು ಎಷ್ಟು ಹೊತ್ತಾದರೂ ಫುಡ್ ರೆಡಿ ಮಾಡಿ ಕೊಡದಿದ್ದಕ್ಕೆ ಕೋಪಗೊಂಡಿದ್ದರು. ನನ್ನ ಆರ್ಡರ್ ಇನ್ನೂ ರೆಡಿಯಾಗಿಲ್ಲವಾ? ಎಂದು ಹರ್ನೀತ್ ಕೌಂಟರ್ ಬಳಿ ಹೋಗಿ ವಿಚಾರಿಸಿದರು. ಫುಡ್ ರೆಡಿಯಾಗಲು ಹೆಚ್ಚುವರಿ ಸಮಯ ತೆಗೆದುಕೊಳ್ಳುತ್ತದೆ ಎಂದು ಅವರಿಗೆ ತಿಳಿಸಲಾಯಿತು. ಇದರಿಂದ ಹರ್ನೀತ್ ಜಗಳ ಮಾಡಿದರು. ಕೊಟ್ಟ ಹಣವನ್ನು ವಾಪಾಸ್ ಕೊಡಲು ಕೇಳಿದರು.

ಈ ಗಲಾಟೆ ದೊಡ್ಡ ಜಗಳವಾಗಿ ಮಾರ್ಪಟ್ಟಿತು. ಅಲ್ಲಿಗೆ ಬಂದ ಆ ರೆಸ್ಟೋರೆಂಟ್ ಮಾಲೀಕ ಅಜಯ್ ನರುಲಾ ಮತ್ತು ಅವರ ಮಗ ಕೇತನ್ ಇಬ್ಬರೂ ಹರ್ನೀತ್‌ನ ಮೇಲೆ ಸೀಕ್ ಕಬಾಬ್ ರಾಡ್ ಮತ್ತು ಪಂಚ್‌ಗಳಿಂದ ಹಲ್ಲೆ ಮಾಡಲು ಪ್ರಾರಂಭಿಸಿದರು. ಹ ಹರ್ನೀತ್ ಸಹಾಯಕ್ಕೆ ಹೋದ ಸ್ನೇಹಿತರ ಮೇಲೂ ದಾಳಿ ನಡೆಯಿತು. ಕೊನೆಗೆ ಹರ್ನೀತ್ ಪ್ರಜ್ಞೆ ಕಳೆದುಕೊಂಡರು. ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರು ಸಾವನ್ನಪ್ಪಿದರು.

ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ. ರೆಸ್ಟೋರೆಂಟ್ ಮಾಲೀಕ ಮತ್ತು ಆತನ ಮಗನನ್ನು ಬಂಧಿಸಲಾಗಿದ್ದು, ಸದ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ, ಹಲವಾರು ಇತರ ರೆಸ್ಟೋರೆಂಟ್ ಉದ್ಯೋಗಿಗಳನ್ನು ಸಹ ಬಂಧಿಸಲಾಗಿದೆ ಮತ್ತು ವಿಚಾರಣೆ ನಡೆಸಲಾಗುತ್ತಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!